ಬಳ್ಳಾರಿಯ ಬಿಡಿಸಿಸಿ ಸಭಾಂಗಣದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು. ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಸಂಪನ್ಮೂಲ ವ್ಯಕ್ತಿಗಳಾದ ಡಾ.ವಿಜಯ ಬಾಸ್ಕರರೆಡ್ಡಿ, ಡಾ.ಸಂಪತ್‌ಕುಮಾರ, ಡಾ.ಶಶಿಧರ ಕೆಲ್ಲೂರು, ಪ್ರಾಧ್ಯಾಪಕರಾದ ಡಾ.ದಸ್ತಗೀರ್ ಸಾಬ್, ದೊಡ್ಡ ಬಸವರಾಜ, ಡಾ.ಗುರು ಬಸವರಾಜ ಇದ್ದರು. ====
ಬಳ್ಳಾರಿ : ಕ್ರೀಡಾಪಟುಗಳು ಅಕ್ರಮ ಕಾರ್ಯಕ್ಷಮತೆ ಹೆಚ್ಚಿಸುವ ಔಷಧಗಳನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ಇದು ದೊಡ್ಡ ಅಪರಾಧ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಹೇಳಿದರು.
ನಗರದ ಬಿಡಿಎಎ ಸಭಾಂಗಣದಲ್ಲಿ ಎಸ್‌ಎಸ್‌ಎ ಕಾಲೇಜು, ರೂಸಾ ಹಾಗೂ ಕ್ರೀಡಾ ವಿಭಾಗಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕ್ರೀಡಾಪಟು ಅಕ್ರಮ ಕಾರ್ಯಕ್ಷಮತೆ ಹೆಚ್ಚಿಸುವ ಔಷಧಗಳ ಅರಿವು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಈ ಔಷಧಗಳ ಸೇವನೆಯು ಅಪಾಯಕಾರಿ. ವೃತ್ತಿಪರ ಮತ್ತು ಹವ್ಯಾಸಿ ಕ್ರೀಡಾಪಟುಗಳಿಬ್ಬರಿಗೂ ಗಂಭೀರ ಆರೋಗ್ಯ ಅಪಾಯವನ್ನುಂಟು ಮಾಡುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಕಿರಣಕುಮಾರ್ ಕುಲಕರ್ಣಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ದೊರೆಯುವ ಮಾದಕ ವಸ್ತುಗಳನ್ನು ಕುಡಿಯಬಾರದು ಆರೋಗ್ಯ ಉತ್ತಮವಾಗಿರಬೇಕಾದರೆ ಇವುಗಳ ಸೇವನೆಯಿಂದ ದೂರ ಇರುವುದು ಒಳಿತು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಪ್ರಹ್ಲಾದ್ ಚೌದ್ರಿ ಮಾತನಾಡಿ, ಮಾದಕ ವಸ್ತುಗಳು ಮಾನಸಿಕ ಆರೋಗ್ಯದ ಮೇಲೂ ವ್ಯತಿರಿಕ್ತವಾದ ಪರಿಣಾಮ ಬೀರಲಿದೆ. ಕ್ರೀಡಾಪಟುಗಳು ಶಿಸ್ತು, ಪ್ರಾಮಾಣಿಕತೆ ಮತ್ತು ಉತ್ತಮ ಗುರಿಯನ್ನು ಮೈಗೂಡಿಸಿಕೊಂಡು ಸಾಗಬೇಕು ಎಂದು ತಿಳಿಸಿದರು.