ಮತ್ತೊಂದು ದೂರು : ಇದೇ ಘಟನೆಗೆ ಸಂಬಂಧ ಕೆಐಎಡಿಬಿ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಜನಾರ್ದನ ನಾಯ್ಕ ನೀಡಿದ ದೂರು ಆಧರಿಸಿ ನಾಲ್ವರ ಮೇಲೆ ಪ್ರಕರಣ ದಾಖಲಿಸಿಲಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಜಾಲಿ ಗಿಡಗಳನ್ನು ತೆರವುಗೊಳಿಸುವ ವೇಳೆ ತಿಮ್ಮಪ್ಪ, ಹನುಮಂತ, ಪಂಪಣ್ಣ, ಮತ್ತು ರಾಮಣ್ಣ ಸೇರಿ ಜಮೀನಿನಲ್ಲಿ ಉಳುಮೆ ಮಾಡಲು ಯತ್ನಿಸಿದರು. ಇದನ್ನು ತಡೆದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ಆರೋಪಿಗಳು ಕಲ್ಲು ತೂರಾಟ ನಡೆಸಿ. ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.