

ಪ್ರಮುಖ ಮುಖ್ಯಾಂಶಗಳು
ನಿತ್ಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಕಷ್ಟು ನಿರುಪಯುಕ್ತ ವಸ್ತುಗಳು ಬರುತ್ತವೆ. ಅವುಗಳನ್ನು ಬಳಸಿ ಕಲಾಕೃತಿಯನ್ನು ನಿರ್ಮಿಸಿದ್ದೇವೆ. ಇಲಾಖೆ ಅಧಿಕಾರಿಗಳ ಸಹಕಾರ ಇದಕ್ಕೆ ಇನ್ನಷ್ಟು ಶಕ್ತಿ ತುಂಬುತ್ತಿದೆ. ಸಾರ್ವಜನಿಕರಲ್ಲಿ ಕಸದ ಕುರಿತು ಜಾಗೃತಿ ಅಗತ್ಯವಿದೆ.
ಪುರಸಭೆಯಿಂದ ಮನೆ ಬಾಗಿಲಿಗೆ ಬರುವ ಕಸದ ವಾಹನಕ್ಕೆ ಮನೆಯ ಕಸವನ್ನು ಬೇರ್ಪಡಿಸಿ ನೀಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಸದಿಂದ ಮರುಬಳಕೆ ಮಾಡಬಹುದು ಎಂಬುದನ್ನು ಪೌರಕಾರ್ಮಿಕರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾರ್ವಜನಿಕರು ಪಟ್ಟಣವನ್ನು ಸ್ವಚ್ಛವಾಗಿಡಲು ಪುರಸಭೆಯೊಂದಿಗೆ ಸಹಕರಿಸಬೇಕು.