ಬಳ್ಳಾರಿ : ರಾಜ್ಯದ ನಾನಾ ಜಿಲ್ಲೆಗಳಲ್ಲಿ ಕೇವಲ ಹೋಂಡಾ ಕಂಪನಿ ಹಾಗೂ ಸ್ಪ್ಲೆಂಡರ್ ಬೈಕ್‌ಗಳನ್ನೇ ಗುರಿಯಾಗಿಸಿ ಕದಿಯುತ್ತಿದ್ದ ನಗರದ ಅವಂಬಾವಿ ನಿವಾಸಿ ಸ್ಪ್ಲೆಂಡರ್ ಸಿದ್ದಾರೆಡ್ಡಿ ಎಂಬ ಆರೋಪಿಯನ್ನು ಬಂಧಿಸಿ, 20.50 ಲಕ್ಷ ರೂ. ಮೌಲ್ಯದ 41ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಸಿದ್ದಾರೆಡ್ಡಿ, ಹೀರೊ ಹೋಂಡಾ ಮತ್ತು ಸ್ಪ್ಲೆಂಡರ್ ಬೈಕ್‌ಗಳ ಕೀಲಿ ಕೈ (ಲಾಕ್) ಓಪನ್ ಮಾಡುವುದರಲ್ಲಿ ಕೈಚಳಕ ಹೊಂದಿದ್ದ. ಇದೇ ಕಾರಣಕ್ಕೆ ಈತನನ್ನು ಸ್ಪ್ಲೆಂಡರ್ ಸಿದ್ದಾರೆಡ್ಡಿ ಎಂಬ ಹೆಸರು ಬಂದಿದೆ. ಕಳೆದ ಒಂದು ವರ್ಷದಲ್ಲಿ ಈತ ಕದ್ದಿರುವ ಒಟ್ಟು 41 ಬೈಕ್‌ಗಳ ಪೈಕಿ 31 ಬೈಕ್‌ಗಳು ಕೇವಲ ಸ್ಪ್ಲೆಂಡರ್ ಕಂಪನಿಯದ್ದೇ ಆಗಿರುವುದು ಆರೋಪಿಯ ಕಳ್ಳತನದ ವಿಶೇಷತೆಯಾಗಿದೆ.
ಬಳ್ಳಾರಿ, ವಿಜಯನಗರ ಹಾಗೂ ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೈಕ್ ಕದಿಯುತ್ತಿದ್ದ. ಆರೋಪಿಯೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್‌ಗಳ ನಂಬರ್ ಪ್ಲೇಟ್‌ಗಳ ಫೊಟೋಗಳನ್ನು ಮೊಬೈಲ್‌ನಲ್ಲಿ ತೆಗೆದುಕೊಂಡು ಕರ್ನಾಟಕ ಒನ್ ಸೆಂಟರ್‌ನಲ್ಲಿ ಬೈಕ್ ಆರ್‌ಸಿ ಕಳೆದಿದ್ದು, ನಕಲಿ ಆರ್‌ಸಿ ತೆಗೆಸಿಕೊಡಿ ಎಂಬುದಾಗಿ ನಕಲಿ ಆರ್‌ಸಿ ಪಡೆಯುತ್ತಿದ್ದ. ಬೈಕ್‌ಗಳನ್ನು ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಬೆಲೆಗೆ ಬೈಕ್‌ಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದ.
ಇತ್ತೀಚೆಗೆ ಸಿರಗುಪ್ಪ ಪಟ್ಟಣದಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣದ ಬೇಧಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಒಟ್ಟಾರೆ ಆರೋಪಿಯಿಂದ 20.50 ಲಕ್ಷ ರೂ. ಮೌಲ್ಯದ 41 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ಎಎಸ್ಪಿ ಎನ್.ನವೀನ್ ಕುಮಾರ್ ನೇತೃತ್ವದ ಸಿರಗುಪ್ಪ ಡಿವೈಎಸ್ಪಿ ಮಾಲತೇಶ ಕೊನಬೇವು, ಸಿಪಿಐ ವೈ.ಎಸ್.ಹನುಮಂತಪ್ಪ, ಪಿಎಸ್‌ಐಗಳಾದ ಪರಶುರಾಮ್, ಎಸ್.ಕೆ.ಮಲ್ಲಯ್ಯ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ ಎಂದು ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ತಿಳಿಸಿದರು.