ಭೂ ಸಂತ್ರಸ್ತರ ಬಂಧನ ಖಂಡನೀಯ

ಸಂಡೂರು ತಾಲೂಕು ತೋರಣಗಲ್ ನಾಡಕಚೇರಿ ಎಸ್‌ಡಿಎ ಮಂಜುಲತಾಗೆ ಸಿಪಿಐ(ಎಂ) ಪದಾಧಿಕಾರಿಗಳು ಮನವಿ ಸಲ್ಲಿಸಿದರು.  ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಎ.ಸ್ವಾಮಿ, ಕರ್ನಾಟಕ ಪ್ರಾಂತ ರೈತಸಂಘ ಕುರೇಕುಪ್ಪ ಘಟಕದ ಅಧ್ಯಕ್ಷ ಪಂಪನಗೌಡ, ಪ್ರಮುಖರಾದ ಎನ್.ಶಂಕರಣ್ಣ, ಶಿವರೆಡ್ಡಿ, ಎಸ್.ಕಾಲೂಬಾ, ವಿ.ದೇವಣ್ಣ, ಸಿದ್ದಪ್ಪ, ಬಂಡಿ ಇಮಾಮ್ ಸಾಬ್, ಅಂಚೆ ಶಂಕರಪ್ಪ, ಆರ್.ಎಸ್.ದೊಡ್ಡಬಸಪ್ಪ, ಮುರ್ಗೇಶ್ ಇದ್ದರು.
ಸಂಡೂರು ತಾಲೂಕು ತೋರಣಗಲ್ ನಾಡಕಚೇರಿ ಎಸ್‌ಡಿಎ ಮಂಜುಲತಾಗೆ ಸಿಪಿಐ(ಎಂ) ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಎ.ಸ್ವಾಮಿ, ಕರ್ನಾಟಕ ಪ್ರಾಂತ ರೈತಸಂಘ ಕುರೇಕುಪ್ಪ ಘಟಕದ ಅಧ್ಯಕ್ಷ ಪಂಪನಗೌಡ, ಪ್ರಮುಖರಾದ ಎನ್.ಶಂಕರಣ್ಣ, ಶಿವರೆಡ್ಡಿ, ಎಸ್.ಕಾಲೂಬಾ, ವಿ.ದೇವಣ್ಣ, ಸಿದ್ದಪ್ಪ, ಬಂಡಿ ಇಮಾಮ್ ಸಾಬ್, ಅಂಚೆ ಶಂಕರಪ್ಪ, ಆರ್.ಎಸ್.ದೊಡ್ಡಬಸಪ್ಪ, ಮುರ್ಗೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತೋರಣಗಲ್‌ನಲ್ಲಿ ಸಿಪಿಐ(ಎಂ) ಪ್ರತಿಭಟನೆ
  • ಸಂಡೂರು ತೋರಣಗಲ್ ನಾಡಕಚೇರಿ ಸಿಪಿಐ(ಎಂ) ಪ್ರತಿಭಟನೆ
ಸಂಡೂರು: ಜಿಂದಾಲ್‌ಗೆ ಅಕ್ರಮವಾಗಿ ಭೂ ಮಾರಾಟ ಮಾಡಿದವರ ವಿರುದ್ಧ ಹೋರಾಟ ಮಾಡುತ್ತಿದ್ದ ಕುಡುತಿನಿ ಹಾಗೂ ಸುತ್ತಲಿನ ಹಳ್ಳಿಯ ಭೂ ಸಂತ್ರಸ್ತರನ್ನು ಅಕ್ರಮವಾಗಿ ಬಂಧಿಸಿರುವುದು ಖಂಡನೀಯ ಎಂದು ಸಿಪಿಐ (ಎಂ) ಪದಾಧಿಕಾರಿಗಳು ತೋರಣಗಲ್ ನಾಡಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಸಿಪಿಐ (ಎಂ) ಜಿಲ್ಲಾ ಸಮಿತಿ ಸದಸ್ಯ ಜೆ.ಎಂ.ಚನ್ನಬಸಯ್ಯ ಮಾತನಾಡಿ, ಕೆಐಎಡಿಬಿ, ಆರ್ಸೆಲರ್ ಮಿತ್ತೆಲ್ ಹಾಗೂ ಇತರ ಕಂಪನಿಗಳು ಕೈಗಾರಿಕೆ ಸ್ಥಾಪನೆಗೆ 2010-12ರಲ್ಲಿ 5,365 ಎಕರೆಗೂ ಹೆಚ್ಚು ಭೂಮಿಯನ್ನು ಬಲವಂತವಾಗಿ ಭೂ ಸ್ವಾಧೀನ ಮಾಡಿಕೊಂಡಿವೆ. ಹಲವು ವರ್ಷ ಕಳೆದರೂ ಕೈಗಾರಿಕೆಗಳನ್ನು ಸ್ಥಾಪಿಸದೆ, ರೈತರ ಜಮೀನುಗಳನ್ನು ತುಂಡು ಭೂಮಿಗಳನ್ನಾಗಿ ಪರಿವರ್ತಿಸಿ ಅಕ್ರಮವಾಗಿ ರಿಯಲ್ ಎಸ್ಟೇಟ್ ದಂಧೆಯಂತೆ ಮಾರಾಟ ಮಾಡುತ್ತಿವೆ. ನ್ಯಾಯಯುತ ಪರಿಹಾರಕ್ಕಾಗಿ ಸಂತ್ರಸ್ತ ರೈತ ಕುಟುಂಬಗಳು 1,228 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿವೆ ಎಂದು ತಿಳಿಸಿದರು.
ಜಿಲ್ಲಾಡಳಿತ ಭೂಸ್ವಾಧೀನ ಬೆಲೆ ನಿಗದಿಯಲ್ಲಿ ಆಗಿರುವ ಅನ್ಯಾಯವನ್ನು ಒಪ್ಪಿಕೊಂಡಿದೆ. ನ್ಯಾಯಾಲಯದಲ್ಲಿ ದಾವೆ ಹೂಡಿದ ಈ ಪ್ರದೇಶದ ರೈತರಿಗೆ ಎಕರೆಗೆ 1.30 ಕೋಟಿ ರೂ.ವರೆಗೆ ಪರಿಹಾರ ನೀಡಲಾಗಿದೆ. ಸುಪ್ರೀಂಕೋರ್ಟ್ ತೀರ್ಪು ಎಲ್ಲ ರೈತರಿಗೂ ಅನ್ವಯಿಸುವಂತೆ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಮುಖ್ಯಮಂತ್ರಿ, ಹಲವು ಮಂತ್ರಿಗಳು, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಉನ್ನತ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಭರವಸೆಯಂತೆ ನಡೆದುಕೊಳ್ಳದೆ ವಂಚಿಸಿದ್ದಾರೆ ಎಂದು ದೂರಿದರು.
ಏ.15ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂತ್ರಸ್ತರ ಸಭೆ ನಡೆಸಲಾಗಿತ್ತು. ನ್ಯಾಯಯುತ ಪರಿಹಾರ ದೊರೆಯುವವರೆಗೂ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ಒತ್ತಾಯಿಸಲಾಗಿತ್ತು. ರಾಜ್ಯ ಸರ್ಕಾರ ಮತ್ತು ಬಳ್ಳಾರಿ ಜಿಲ್ಲಾಡಳಿದ ಕ್ರಮವನ್ನು ಪ್ರತಿಭಟಿಸಿ ಹೋರಾಟನಿರತ ರೈತರನ್ನು ಅಕ್ರಮವಾಗಿ ಬಂಧಿಸಲಾಗಿದೆ. ಜಿಂದಾಲ್ ಕಂಪನಿಗೆ ಭೂಮಿಯನ್ನು ಅಳತೆ ಮಾಡಿ ಕೊಡಬೇಕೆಂದು ಜಿಲ್ಲಾಡಳಿತ ಹಾಗೂ ಕೆಐಎಡಿಬಿಯು ಏ.27ರಿಂದ ಮೇ.7ರವರೆಗೆ ಉಪವಿಭಾಗಾಧಿಕಾರಿಯಿಂದ ಬಿಎನ್‌ಎಸ್ 2023ರ ಕಲಂ 163ರ ನಿಷೇಧಾಜ್ಞೆ ಹೊರಡಿಸಿದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net