ಮನೆಗಳ್ಳತನ ಆರೋಪಿಗಳ ಬಂಧನ

ಮನೆಗಳ್ಳತನ ಆರೋಪಿಗಳ ಬಂಧನ
ಮನೆಗಳ್ಳತನ ಆರೋಪಿಗಳ ಬಂಧನ
Published on

ಪ್ರಮುಖ ಮುಖ್ಯಾಂಶಗಳು

  • ಮೌಲ್ಯದ ಅಭರಣಗಳನ್ನು ಜಪ್ತಿ
  • ಮನೆಗಳ್ಳತನ ಎಸಗಿದ ಪ್ರಕರಣ
ಬಳ್ಳಾರಿ : ಜಿಲ್ಲೆಯ ವಿವಿಧಡೆ ಮನೆಗಳ್ಳತನ ಎಸಗಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ, 16.80 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ.
ತಾಲೂಕಿನ ಜಾನೆಕುಂಟೆ ನಿವಾಸಿಗಳಾದ ಮಲ್ಲಿಕಾರ್ಜುನ ನಾಯ್ಕ, ಅನಿಲ್ ಕುಮಾರ್ ನಾಯ್ಕ ಬಂಧಿತರು. ಆರೋಪಿಗಳಿಂದ 15.90 ಲಕ್ಷ ರೂ. ಮೌಲ್ಯದ ಬಂಗಾರ, 70 ಸಾವಿರ ರೂ. ಮೌಲ್ಯದ 350 ಗ್ರಾಂ ಬೆಳ್ಳಿ ಹಾಗೂ 20 ಸಾವಿರ ರೂ. ನಗದು ಸೇರಿ ಒಟ್ಟು 16.80 ಲಕ್ಷ ಮೌಲ್ಯದ ಅಭರಣಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಆರೋಪಿಗಳು ಜಿಲ್ಲೆಯ ವಿವಿಧೆಡೆ ಬರೋಬ್ಬರಿ 11 ಸ್ವತ್ತಿನ (ಮನೆಗಳ್ಳತನ) ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net