ಕಸ ಎಲ್ಲಂದರಲ್ಲಿ ಹಾಕಿದರೆ ಸೂಕ್ತ ಕ್ರಮ

ಸಂಡೂರಿನ 3ನೇ ವಾರ್ಡಿನ ಅಂಬೇಡ್ಕರ್ ಕಾಲನಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ತ್ಯಾಜ್ಯದಿಂದ ಸ್ವಾತಂತ್ರ್ಯ ಸ್ವಚ್ಛನಗರ ಆರೋಗ್ಯಕರ ರಾಷ್ಟ್ರ  ಎಂಬ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಪರಿಸರ ಅಭಿಯಂತರೆ ಡಿ.ಅನ್ನಪೂರ್ಣ ಮಾತನಾಡಿದರು. ಕಿರಿಯ ಅರೋಗ್ಯ ನಿರೀಕ್ಷಕಿ ಕೆ.ಶಿವರಂಜಿನಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಾಧಿಕಾರಿ ವಿನಯ್ ಕುಮಾರ್ ಗೌಡ ಹೇಳಿಕೆ
  • ಜಾಗೃತಿ ಕಾರ್ಯಕ್ರಮ

ಸಂಡೂರು: ಸ್ವಾತಂತ್ರ್ಯೋತ್ಸವ ಅಭಿಯಾನದ ಅಂಗವಾಗಿ ಸ್ವಾತಂತ್ರ್ಯ, ಸ್ವಚ್ಛನಗರ ಆರೋಗ್ಯಕರ ರಾಷ್ಟ್ರ ಅಭಿಯಾನದಡಿ ಅಂಬೇಡ್ಕರ್ ಕಾಲನಿಯಲ್ಲಿ ತ್ಯಾಜ್ಯದ ಮೂಲದಲ್ಲೇ ಕಸ ವಿಂಗಡಣೆ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಿರುವುದು, ಸುಡುವುದನ್ನು ತಡೆಯುವುದು ಮತ್ತು ಬಯಲು ಶೌಚಮುಕ್ತ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ವಿನಯ್ ಕುಮಾರ್ ಗೌಡ ಹೇಳಿದರು.

ಪಟ್ಟಣದ 3ನೇ ವಾರ್ಡಿನ ಅಂಬೇಡ್ಕರ್ ಕಾಲನಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತ್ಯಾಜ್ಯದಿಂದ ಸ್ವಾತಂತ್ರ್ಯ ಸ್ವಚ್ಛನಗರ ಆರೋಗ್ಯಕರ ರಾಷ್ಟ್ರ ಎಂಬ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ಅಭಿಯಂತರೆ ಡಿ.ಅನ್ನಪೂರ್ಣ ಮಾತನಾಡಿ, ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಹಸಿಕಸ, ಒಣಕಸ ಬೇರ್ಪಡಿಸಿ ಪುರಸಭೆ ಕಸದ ಗಾಡಿಯಲ್ಲಿ ಹಾಕಬೇಕು. ಎಲ್ಲಂದರಲ್ಲಿ ಹಾಕಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಖ್ಯಾಧಿಕಾರಿ ಬಿ.ವಿನಯ್ ಕುಮಾರ್ ಗೌಡ, ಪರಿಸರ ಅಭಿಯಂತರೆ ಡಿ.ಅನ್ನಪೂರ್ಣ, ಕಿರಿಯ ಅರೋಗ್ಯ ನಿರೀಕ್ಷಕಿ ಕೆ.ಶಿವರಂಜಿನಿ, ಸಮುದಾಯ ಸಂಘಟಕರಾದ ಕಾವ್ಯಾಂಜಲಿ, ಧೀನಾ, ಮರೆಕ್ಕಾ, ಅನಿತಾ, ಚೈತ್ರಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net