ಪ್ರತ್ಯೇಕ ತನಿಖಾಧಿಕಾರಿಗಳ ನೇಮಕ

ಪ್ರತ್ಯೇಕ ತನಿಖಾಧಿಕಾರಿಗಳ ನೇಮಕ
ಪ್ರತ್ಯೇಕ ತನಿಖಾಧಿಕಾರಿಗಳ ನೇಮಕ
Published on

ಪ್ರಮುಖ ಮುಖ್ಯಾಂಶಗಳು

  • ಸಹೋದರ
  • ಪ್ರಕಟಣೆ
  • ಪ್ರಕರಣ
ಬಳ್ಳಾರಿ : ನಗರದ ವಾಲ್ಮೀಕಿ ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ದಾಖಲಾಗಿರುವ ಆರು ಪ್ರಕರಣಗಳಿಗೆ ಪ್ರತ್ಯೇಕವಾಗಿ ಆರು ತನಿಖಾಧಿಕಾರಿಗಳನ್ನು ನೇಮಿಸಿ ಎಸ್‌ಪಿ ಕಚೇರಿ ಪ್ರಕಟಣೆ ಹೊರಡಿಸಿದೆ.
ಘಟನೆಯಲ್ಲಿ ಗುಂಡು ತಾಕಿ ಮೃತಪಟ್ಟ ರಾಜಶೇಖರ ರೆಡ್ಡಿ ಸಹೋದರ ಬಿ.ಈಶ್ವರ ರೆಡ್ಡಿ ನೀಡಿರುವ ದೂರಿನ ತನಿಖೆಗೆ, ಬ್ರೂಸ್‌ಪೇಟೆ ಠಾಣೆಯ ಸಿಪಿಐ ಮಹಾಂತೇಶ್ ಟಿ., ನಗರ ಶಾಸಕ ನಾರಾ ಭರತ್‌ರೆಡ್ಡಿ ಅಪ್ತ ಚಾನಾಳ್ ಶೇಖರ್ ನೀಡಿದ ದೂರಿನ ತನಿಖೆಗೆ ಪಿಎಸ್‌ಐ ಮಲ್ಲಿಕಾರ್ಜುನ, ಹವಂಬಾವಿ ಟಿ.ಲೋಕೇಶ್ ಮತ್ತು ನಾಗರಾಜ್ ನೀಡಿರುವ ದೂರಿನ ತನಿಖೆಗೆ ಡಿಸಿಆರ್‌ಇ ಪೊಲೀಸ್ ಠಾಣೆಯಿಂದ, ಸ್ವಯಂ ಪ್ರೇರಿತವಾಗಿ ನಗರ ಡಿವೈಎಸ್ಪಿ ಚಂದ್ರಕಾಂತ್ ನಂದಾರೆಡ್ಡಿ ದಾಖಲಿಸಿರುವ ಗಾಂಧಿನಗರ ಠಾಣೆಯ ಪಿಐ ರವಿಚಂದ್ರನ್ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ನೀಡಿರುವ ದೂರನ್ನು ಸಂಚಾರಿ ಠಾಣೆಯ ಸಿಪಿಐ ಅಯ್ಯನಗೌಡ ಪಾಟೀಲ್ ತನಿಖೆ ನಡೆಸಲು ನಿಯೋಜಿಸಲಾಗಿದೆ. ಈವರೆಗೆ ಈ ಘಟನೆ ಸಂಬಂಧಿಸಿ 26 ಜನರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದೆ.
ಬಾಕ್ಸ್ : ಬ್ಯಾನರ್ ಗಲಾಟೆ ಸಂಬಂಧ ತಹಸೀಲ್ದಾರ್ ಕೋರ್ಟ್‌ನಿಂದ ಶಾಸಕ ಜಿ. ಜನಾರ್ದನರೆಡ್ಡಿ, ಮಾಜಿ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಬಿ.ಶ್ರೀರಾಮುಲು, ಸುರೇಶಬಾಬು, ಬಿಜೆಪಿ ಮುಖಂಡರು, ಮಹಿಳೆಯರು, ತೃತೀಯ ಲಿಂಗಿಗಳು ಸೇರಿ ಒಟ್ಟು 33 ಜನರ ವಿರುದ್ಧ 126 ಅ್ಯಕ್ಟ್ ಅಡಿಯಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ.
=========
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net