ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಎಫ್‌ಐಡಿ ಮೂಲಕ ರಸಗೊಬ್ಬರ ತೆಗೆದುಕೊಳ್ಳುವಂತೆ ಆದೇಶಿಸಿದ್ದು ರೈತರಿಗೆ ತೊಂದರೆಯಾಗಿದೆ. ರೈತರ ಬೆಳೆಗೆ ತಕ್ಕಂತೆ ಯೂರಿಯಾ, ಇತರೆ ರಸಗೊಬ್ಬರಗಳನ್ನು ಪೂರ್ಣ ಬೆಳೆಗೆ ಬೇಕಾಗುವಷ್ಟು ರಸಗೊಬ್ಬರ ಖರೀದಿಗೆ ಅನುಕೂಲ ಮಾಡಿಕೊಡಬೇಕಿದೆ. ಎಫ್‌ಐಡಿ ಮೂಲಕ ಪ್ರತಿ ಎಕರೆಗೆ ಪ್ರತಿ ತಿಂಗಳಿಗೆ ಒಂದು ಚೀಲ ಯೂರಿಯಾ ಎನ್ನುವ ಮಿತಿಯನ್ನು ರದ್ದುಗೊಳಿಸಬೇಕು. ಖರೀದಿ ಮಾಡುವ ರಸಗೊಬ್ಬರಗಳ ಜತೆ ಅವಶ್ಯಕತೆ ಇಲ್ಲದಿದ್ದರೂ ಲಿಂಕ್ ಗೊಬ್ಬರ, ಔಷಧ ಖರೀದಿಸುವಂತೆ ಒತ್ತಡ ಹೇರುವ ವಿತರಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ರಸಗೊಬ್ಬರ ಖರೀದಿಗೆ ಎಫ್‌ಐಡಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.