ಶಾಶ್ವತನೆಲೆ ಒದಗಿಸಲು ಸಿಎಂಗೆ ಮನವಿ

ಕಂಪ್ಲಿಯಲ್ಲಿ ಅಲೆಮಾರಿ ಸಿಂಧೋಳ್ಳು ಸಮುದಾಯದವರೊಂದಿಗೆ ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ರಾಜ್ಯ ಉಪಾಧ್ಯಕ್ಷ ವೈ.ಶಿವಕುಮಾರ್ ಸಮಾಲೋಚಿಸಿದರು. ಪ್ರಮುಖರಾದ ಎಚ್.ಪಿ.ಶಿಕಾರಿರಾಮು, ಎಂ.ಗಾಳಿಕುಮಾರ್, ರಾವುಲ್ ನಾಗಪ್ಪ, ಸಣ್ಣ ಹುಲುಗಪ್ಪ ಇತರರಿದ್ದರು.
ಕಂಪ್ಲಿಯಲ್ಲಿ ಅಲೆಮಾರಿ ಸಿಂಧೋಳ್ಳು ಸಮುದಾಯದವರೊಂದಿಗೆ ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ರಾಜ್ಯ ಉಪಾಧ್ಯಕ್ಷ ವೈ.ಶಿವಕುಮಾರ್ ಸಮಾಲೋಚಿಸಿದರು. ಪ್ರಮುಖರಾದ ಎಚ್.ಪಿ.ಶಿಕಾರಿರಾಮು, ಎಂ.ಗಾಳಿಕುಮಾರ್, ರಾವುಲ್ ನಾಗಪ್ಪ, ಸಣ್ಣ ಹುಲುಗಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಂಧೋಳ್ಳು
  • ಸಮುದಾಯ
  • ಕಾಲನಿ
ಕಂಪ್ಲಿ: ಮಳೆಯಿಂದ ರಕ್ಷಿಸಿಕೊಳ್ಳಲು ರಾಜ್ಯದ ಅಲೆಮಾರಿಗಳಿಗೆ 20ಸಾವಿರ ತಾಡಪಾಲುಗಳನ್ನು ವಿತರಿಸಲಾಗಿದೆ ಎಂದು ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ರಾಜ್ಯ ಉಪಾಧ್ಯಕ್ಷ ವೈ.ಶಿವಕುಮಾರ್ ಹೇಳಿದರು.
ಅಲೆಮಾರಿಗಳ ಸ್ಥಿತಿಗತಿ ಅರಿಯಲು ಇಲ್ಲಿನ ಅಲೆಮಾರಿ ಸಿಂಧೋಳ್ಳು ಸಮುದಾಯ ಕಾಲನಿಗೆ ಶನಿವಾರ
ಭೇಟಿ ನೀಡಿ ಮಾತನಾಡಿದರು. ಜಿಲ್ಲೆಯ 1,100ಅಲೆಮಾರಿಗಳಿಗೆ ತಾಡಪಾಲು ವಿತರಿಸಲಾಗಿದೆ. ಜಿಲ್ಲೆಯ 2,500 ಸೇರಿ ರಾಜ್ಯದಲ್ಲಿ 75ಸಾವಿರದಷ್ಟು ಅಲೆಮಾರಿ ಕುಟುಂಬಗಳಿದ್ದು, ಶಾಶ್ವತ ನೆಲೆ ನಿಲ್ಲಲು ಸೂಕ್ತಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ರಾಜ್ಯ ಅಲೆಮಾರಿ ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಪಿ.ಶಿಕಾರಿ ರಾಮು ಮಾತನಾಡಿ, ಅಲೆಮಾರಿಗಳಿಗೆ ತಾತ್ಕಾಲಿಕ ನೆರವು ನೀಡುವ ಬದಲಿಗೆ ಶಾಶ್ವತವಾಗಿ ಅಲೆಮಾರಿತನ ತಪ್ಪಿಸಿ ಒಂದೆಡೆ ನೆಲೆ ನಿಲ್ಲಲು ಕೃಷಿಗೆ ಭೂಮಿ, ನಿವೇಶನದೊಂದಿಗೆ ವಸತಿ ಸೌಲಭ್ಯ ಕಲ್ಪಿಸಬೇಕು.
ಜಿಲ್ಲೆಗೊಂದು ಅಲೆಮಾರಿ ವಸತಿ ಶಾಲೆಗಳನ್ನು ಆರಂಭಿಸಬೇಕು. ರಾಜ್ಯದ ಅಲೆಮಾರಿಗಳ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ತಾಲೂಕಿಗೊಂದು ಅಲೆಮಾರಿ ಸಮುದಾಯ ಭವನ ನಿರ್ಮಿಸಬೇಕು. ರಾಜ್ಯ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 500ಕೋಟಿ ರೂ.ಅನುದಾನ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು.
ಇತ್ತೀಚೆಗೆ ಪಟ್ಟಣದ ಅಲೆಮಾರಿ ಸಿಂಧೋಳ್ಳು ಸಮಾಜದ ರಾಜ್ಯ ಉಪಾಧ್ಯಕ್ಷ ಚಿನ್ನಯಲ್ಲಪ್ಪ ನಿಧನರಾಗಿದ್ದು, ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಪರಿಹಾರ ಧನ ವಿತರಿಸಿದರು.
ಮೇದಾ ಸಮಾಜದ ತಾಲೂಕು ಅಧ್ಯಕ್ಷ ಎಂ.ಗಾಳಿಕುಮಾರ್, ಸಿಂಧೋಳ್ಳು ಸಮಾಜದ ರಾಜ್ಯ ಗೌರವಾಧ್ಯಕ್ಷ ರಾವುಲ್ ನಾಗಪ್ಪ, ತಾಲೂಕು ಸುಡುಗಾಡು ಸಿದ್ಧರ ಸಮಾಜದ ಅಧ್ಯಕ್ಷ ಸಣ್ಣ ಹುಲುಗಪ್ಪ, ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ಜೆ.ಬಾಬು, ಕಾಲನಿ ಪ್ರಮುಖರಾದ ಯಲ್ಲಮ್ಮ, ದುರುಗಮ್ಮ, ನಾಗಮ್ಮ, ಮಾರೆಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net