ಬ್ಯಾನರ್ ಗಲಾಟೆಯಲ್ಲಿ ರಾಜಶೇಖರ ಎಂಬ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿನಿಂದ ಮೃತಪಟ್ಟಿದ್ದಾನೆ. ಈಗಾಗಲೇ ಸಾವಿಗೆ ಸಂಬಂಧಪಟ್ಟ ವಿಡಿಯೋ ಹಾಗೂ ಅಗತ್ಯ ದಾಖಲೆಗಳನ್ನು ಸಿಐಡಿ ಅಧಿಕಾರಿಗಳಿಗೆ ನೀಡಲಾಗಿದೆ. ಆದರೆ, ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರ ಸಿಐಡಿಗೆ ವಹಿಸಿದ್ದೇವೆ ಎಲ್ಲವೂ ಮುಗಿದಿದೆ ಎಂಬುದಾಗಿ ಅಂದುಕೊಂಡಿದ್ದಾರೆ. ಶಾಸಕ ಜಿ.ಜನಾರ್ದನರೆಡ್ಡಿ ಮನೆಯ ಮೇಲೆ ದಾಳಿ ಬಗ್ಗೆ ನಿರಂತರವಾಗಿ ಹೋರಾಟ ಮಾಡಲಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿಂದಲೂ ನಿರಂತರವಾಗಿ ಅತ್ಯಾಚಾರ, ಕೊಲೆ, ದರೋಡೆ, ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬುದಾಗಿ ಆರೋಪಿಸಿದರು. ರಾಜ್ಯದ ಅಬಕಾರಿ ಇಲಾಖೆಯ ಭ್ರಷ್ಟಚಾರ ಗಮನಿಸಿದರೆ ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣ ಮೀರಿಸುವಂತೆಯಿದೆ ಎಂದು ಟೀಕಿಸಿದರು.