50 ಲಕ್ಷ ರೂ. ವೆಚ್ಚದಲ್ಲಿ ಅಂಜುಮನ್ ಮಹಲ್ ನಿರ್ಮಾಣ

ಕಂಪ್ಲಿಯಲ್ಲಿ ಅಂಜುಮನ್ ಮಹಲ್ ಕಟ್ಟಡ ನಿರ್ಮಾಣಕ್ಕೆ ಮುಸ್ಲಿಂ ಧರ್ಮಗುರು ಸೈಯದ್ ಷಾಹ್ ಅಬುಲ್ ಹಸನ್ ಖಾದ್ರಿ ಚಾಲನೆ ನೀಡಿದರು.
ಕಂಪ್ಲಿಯಲ್ಲಿ ಅಂಜುಮನ್ ಮಹಲ್ ಕಟ್ಟಡ ನಿರ್ಮಾಣಕ್ಕೆ ಮುಸ್ಲಿಂ ಧರ್ಮಗುರು ಸೈಯದ್ ಷಾಹ್ ಅಬುಲ್ ಹಸನ್ ಖಾದ್ರಿ ಚಾಲನೆ ನೀಡಿದರು.
Published on
ಕಂಪ್ಲಿ: ಮುಸ್ಲಿಮರ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗಾಗಿ ಅಂಜುಮನ್ ಮಹಲ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅಂಜುಮನ್ ಖಿದ್ಮತ್ ಎ-ಇಸ್ಲಾಂ ಸಮಿತಿ ತಾಲೂಕು ಅಧ್ಯಕ್ಷ ಕೆ.ಮಸ್ತಾನ್ ವಲಿ ಹೇಳಿದರು.
ಪಟ್ಟಣದ ಬೆಳಗೋಡ್‌ಹಾಳ್ ಮಾರ್ಗದಲ್ಲಿ ಅಂಜುಮನ್ ಮಹಲ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಭಾನುವಾರ ಮಾತನಾಡಿದರು. ಸಮುದಾಯದವರ ಸಹಕಾರದಿಂದ 50 ಲಕ್ಷ ರೂ. ವೆಚ್ಚದಲ್ಲಿ ಅಂಜುಮನ್ ಮಹಲ್ ನಿರ್ಮಿಸಲಾಗುವುದು ಎಂದರು. ಮುಸ್ಲಿಂ ಧರ್ಮಗುರು ಸೈಯದ್ ಷಾಹ್ ಅಬುಲ್ ಹಸನ್ ಖಾದ್ರಿ ಅಂಜುಮನ್ ಮಹಲ್ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.
ಅಂಜುಮನ್ ಖಿದ್ಮತ್ ಎ-ಇಸ್ಲಾಂ ಸಮಿತಿ ಸದಸ್ಯರು, ಮುಸ್ಲಿಂ ಸಮುದಾಯದ ಪ್ರಮುಖರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net