ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಕರ್ನಾಟಕದ ಸರ್ವಜ್ಞ , ತಮಿಳಿನ ತಿರುವಳ್ಳವರ್ ರೀತಿಯಲ್ಲಿ ತೆಲುಗಿನಲ್ಲಿ ಲೋಕಾನುಭವವನ್ನು ಸೇರಿಸಿ ಕಂಡಿದ್ದನ್ನು ಕಂಡ ಹಾಗೆ ಪದ ಕಟ್ಟುವ ಮೂಲಕ ಜನರನ್ನು ಸರಿದಾರಿಗೆ ತರಲು ವೇಮನ ಯತ್ನಿಸಿದರು. ಹೇಮರಡ್ಡಿ ಮಲ್ಲಮ್ಮ ಅವರು ವೇಮನರ ತಪ್ಪುಗಳನ್ನು ತಿದ್ದಿ ಸಾತ್ವಿಕ ಜೀವನದತ್ತ ಕೊಂಡೊಯ್ದರು. ಸಾಧನೆಯ ಮೂಲಕ ಮಹಾ ಯೋಗಿಯಾಗಿ ದೈವತ್ವದ ಕಡೆಗೆ ಮುಖ ಮಾಡಿದರು. ವಚನಗಳ ಮೂಲಕ ಜನರನ್ನು ಧಾರ್ಮಿಕದ ಕಡೆಗೆ ಸೆಳೆದರು ಎಂದರು.