ಪತ್ರಿಕಾಭವನಕ್ಕೆ ನಿವೇಶನ ಮಂಜೂರು ಮಾಡಿ

ಪತ್ರಿಕಾಭವನಕ್ಕಾಗಿ ನಿವೇಶನ ಮಂಜೂರು ಮಾಡುವಂತೆ ಆಗ್ರಹಿಸಿ ಸಿರಗುಪ್ಪ ತಹಸೀಲ್ದಾರ್ ಗೌಸೀಯಾ ಬೇಗಂ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.
ಪತ್ರಿಕಾಭವನಕ್ಕಾಗಿ ನಿವೇಶನ ಮಂಜೂರು ಮಾಡುವಂತೆ ಆಗ್ರಹಿಸಿ ಸಿರಗುಪ್ಪ ತಹಸೀಲ್ದಾರ್ ಗೌಸೀಯಾ ಬೇಗಂ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.
Published on
ಸಿರಗುಪ್ಪ: ಪತ್ರಿಕಾಭವನಕ್ಕಾಗಿ ನಿವೇಶನ ಕಲ್ಪಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಗೌಸೀಯಾ ಬೇಗಂ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಡಿ.ಮಾರೆಪ್ಪ ನಾಯಕ ಮಾತನಾಡಿ, ಸುದ್ದಿಗೋಷ್ಠಿ ನಡೆಸಲು, ಸುದ್ದಿಗಳನ್ನು ಸಿದ್ಧಪಡಿಸಲು ಪತ್ರಕರ್ತರಿಗೆ ಪಟ್ಟಣದಲ್ಲಿ ಸ್ವಂತ ಕಟ್ಟಡ ಇಲ್ಲ. ಈ ಹಿನ್ನೆಲೆಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಬೇಕೆಂದು ಕೋರಿದರು.
ಪದಾಧಿಕಾರಿಗಳಾದ ಜಾಲಿಹಾಳ್ ರಾಜಸಾಬ್, ಸೋಮಯ್ಯ, ನಾಗಪ್ಪ, ರಮೇಶ್ ಉಪ್ಪಾರ್, ಬಸವರೆಡ್ಡಿ, ಓತೂರು ಪಂಪಾಪತಿ, ಡಿ.ಪ್ರಸಾದ್, ಸಾಯಿಬಾಬಾ, ಮಲ್ಲಿಕಾರ್ಜುನ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net