ಕಾರ್ಮಿಕರ ಆರ್ಥಿಕ ಒತ್ತಡ ನಿವಾರಿಸಿ

ಬಳ್ಳಾರಿಯ ಡಿಸಿ ಕಚೇರಿ ಮುಂಭಾಗದಲ್ಲಿ  ನಾನಾ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಜಂಟಿ ಕಾರ್ಮಿಕರ ಸಂಘಟನೆಯಿಂದ ಎಡಿಸಿ ಮಹಮ್ಮದ್ ಎನ್.ಜುಬೇರ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆಯ ಪದಾಧಿಕಾರಿಗಳಾದ ಸತ್ಯಬಾಬು, ಆರ್.ಮಾಧವರೆಡ್ಡಿ, ಶಿವಶಂಕರ್, ಡಿ.ವಿ.ಸೂರ್ಯನಾರಾಯಣ, ದೇವದಾಸ್, ಟಿ.ಜಿ.ವಿಠ್ಠಲ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜಂಟಿ ಕಾರ್ಮಿಕರ ಸಂಘಟನೆಯಿಂದ ಆಗ್ರಹ

ಬಳ್ಳಾರಿ :

ರಾಜ್ಯದಲ್ಲಿ ಕಾರ್ಪೊರೇಟ್ ಕಂಪನಿಗಳ ಭೂ ಕಬಳಿಕೆ ವಿರೋಧಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಜಂಟಿ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.

ಕೃಷಿ ಭೂಮಿ ಕೇವಲ ಒಂದು ಆಸ್ತಿ ಅಲ್ಲ. ಅದು ರೈತರ ಜೀವನಾಧಾರ ಮಾತ್ರವಲ್ಲದೆ ದೇಶದ ಆಹಾರ ಭದ್ರತೆಯ ಆಧಾರವೂ ಆಗಿದೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡು ಕೈಗಾರಿಕೆ, ರಿಯಲ್ ಎಸ್ಟೇಟ್ ಹಾಗೂ ಇತರ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಒದಗಿಸುವ ಕ್ರಮದಿಂದ ರೈತರನ್ನು ಭೂಹೀನರನ್ನಾಗಿ ಮಾಡುತ್ತಿವೆ. ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್ ರದ್ದಾಗೊಳಿಸಿ, ಬೆಲೆ ಏರಿಕೆ ತಡೆಗಟ್ಟಬೇಕು.

ರೈತರ ಭೂಮಿ, ಕಾರ್ಮಿಕರ ಹಕ್ಕುಗಳು ಮತ್ತು ದೇಶದ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಒಪ್ಪಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ರೈತಕಾರ್ಮಿಕರ ಐಕ್ಯತೆ ಹೋರಾಟ ಮತ್ತಷ್ಟು ಬಲಪಡಿಸುವ ಮೂಲಕ ಈ ನೀತಿಗಳ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಸಂಘಟನಕಾರರು ಎಚ್ಚರಿಸಿದರು.

===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net