

ಪ್ರಮುಖ ಮುಖ್ಯಾಂಶಗಳು
ಬಳ್ಳಾರಿ :
ರಕ್ತಹೀನತೆ ಆರಂಭದಲ್ಲೇ ಗುರುತಿಸುವುದರಿಂದ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತ ತಡೆಗಟ್ಟಿ, ಬಾಲ್ಯ ಸದೃಢಗೊಳಿಸಲು ಸಾಧ್ಯ ಎಂದು ಡಿಎಚ್‌ಒ ಡಾ. ಅಲಕಾನಂದ ಡಿ. ಮಳಗಿ ಹೇಳಿದರು.
ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾದಂತೆ ರೋಗನಿರೋಧಕ ಶಕ್ತಿಯೂ ಕುಂದುತ್ತದೆ. ಇದರಿಂದ ಸಣ್ಣಪುಟ್ಟ ಕಾಯಿಲೆಗಳೂ ದೀರ್ಘಾವಧಿಯವರೆಗೆ ಕಾಡಬಹುದು. ಮುಖ್ಯವಾಗಿ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಮುಂದುವರಿದರೆ ಹದಿಹರೆಯದ ಸಮಸ್ಯೆಗಳು ಗಂಭೀರ ಸ್ವರೂಪ ಪಡೆಯುತ್ತವೆ ಎಂದರು.