ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿದ ಅಕ್ಕಮಹಾದೇವಿ

ಹೂವಿನಹಡಗಲಿ ತಿಪ್ಪಾಪುರ ರಸ್ತೆಯ ಸಾಮಿಯಾನದಲ್ಲಿ ಕಸಾಪ ತಾಲೂಕು ಘಟಕದಿಂದ ಆಯೋಜಿಸಿದ್ದ ಕಾವ್ಯಪೂರ್ಣಿಮ, ಬೆಳದಿಂಗಳ ಕವಿಗೋಷ್ಠಿ, ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಕೃಷ್ಣನಾಯ್ಕ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಶೈಲಜಾ ಪವಾಡಶೆಟ್ಟರ್, ಕಸಾಪ ತಾಲೂಕು ಅಧ್ಯಕ್ಷ ಟಿ.ಪಿ.ವೀರೇಂದ್ರ, ಹಿರಿಯ ವಕೀಲ ಹಣ್ಣಿ ಕೈಲಾಸನಾಥ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ದತ್ತಿ
  • ಉಪನ್ಯಾಸ
  • ಕಾರ್ಯಕ್ರಮ
ಹೂವಿನಹಡಗಲಿ: ಸಾಹಿತ್ಯದ ಮೂಲಕ ಹೆಣ್ಣಿನ ಅಸ್ತಿತ್ವನ್ನು ಸಾರಿದ ಕೀರ್ತಿ ಅಕ್ಕಮಹಾದೇವಿಗೆ ಸಲ್ಲುತ್ತದೆ ಎಂದು ಸಹಾಯಕ ಪ್ರಾಧ್ಯಾಪಕಿ ಡಾ.ಶೈಲಜಾ ಪವಾಡಶೆಟ್ಟರ್ ಹೇಳಿದರು.
ಪಟ್ಟಣದ ತಿಪ್ಪಾಪುರ ರಸ್ತೆಯ ಸಾಮಿಯಾನದಲ್ಲಿ ಕಸಾಪ ತಾಲೂಕು ಘಟಕದಿಂದ ಬುಧವಾರ ಆಯೋಜಿಸಿದ್ದ ಕಾವ್ಯಪೂರ್ಣಿಮ, ಬೆಳದಿಂಗಳ ಕವಿಗೋಷ್ಠಿ, ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಚನ

ಹೆಣ್ಣಿನ ಪರವಾದ ಧ್ವ್ವನಿಯನ್ನು ಎತ್ತುವ ಮೂಲಕ ಮೊಟ್ಟಮೊದಲು ವಚನಗಳನ್ನು ರಚಿಸಿದ್ದಾರೆ. 12 ನೇ ಶತಮಾನದಲ್ಲಿ ಹೋರಾಟದ ಮನೋಭಾವನೆ ಬೆಳೆಸಿಕೊಂಡು, ಎಲ್ಲವನ್ನು ತ್ಯಜಿಸಿ ಶಿವ(ಮಲ್ಲಿಕಾರ್ಜುನನ್ನು) ತನ್ನ ಪತಿ ಎಂದು ಸ್ವೀಕರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮಹಿಳೆಯರ ಆತ್ಮಸ್ವಾತಂತ್ರೃ, ವ್ಯಕ್ತಿತ್ವ ಮತ್ತು ಮಾನವೀಯ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿದ್ದರು ಎಂದರು. 
ಶಾಸಕ ಕೃಷ್ಣನಾಯ್ಕ ಮಾತನಾಡಿ, ಕನ್ನಡ ಭಾಷೆ ತನ್ನದೆ ಆದ ಇತಿಹಾಸ ಹೊಂದಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡವನ್ನು ಉಳಿಸುವ ಮುತ್ತು ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯ ಸತ್ವನ್ನು ತಿಳಿಸುವ ಕೆಲಸ ಮಾಡುತ್ತಿದೆ ಎಂದರು.
ಹಿರಿಯ ವಕೀಲ ಹಣ್ಣಿ ಕೈಲಾಸನಾಥ, ಕಸಾಪ ತಾಲೂಕು ಅಧ್ಯಕ್ಷ ಟಿ.ಪಿ.ವೀರೇಂದ್ರ, ಹಿರೇಮಲ್ಲನಕೇರಿಮಠದ ಚನ್ನಬಸವ ಸ್ವಾಮೀಜಿ, ಪುರಸಭೆ ಮಾಜಿ ಸದಸ್ಯ ಕೊಡಿಹಳ್ಳಿ ಮುದುಕಪ್ಪ, ಪ್ರಮುಖರಾದ ಕಾರ್ತಿಕ, ಶಶಿಧರ, ಸೋಮೇಶಪ್ಪ, ರೋಷನ್, ಪ್ರವೀಣ, ಯುವರಾಜಗೌಡ, ಕೊಟ್ರೇಶ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net