ಜಾಗ್ರತೆಯಿಂದ ಸುಸ್ಥಿರ ಜೀವನ ಸಾಧ್ಯ

ಕೂಡ್ಲಿಗಿಯ ಮದಕರಿ ವೃತ್ತದಲ್ಲಿ ಶನಿವಾರ ಎಚ್‌ಐವಿ-ಏಡ್ಸ್ ಕುರಿತು ಜನನಿ ಕಲಾ ತಂಡದಿಂದ ಬೀದಿ ನಾಟಕ ಪ್ರದರ್ಶನಗೊಂಡಿತು.
ಕೂಡ್ಲಿಗಿಯ ಮದಕರಿ ವೃತ್ತದಲ್ಲಿ ಶನಿವಾರ ಎಚ್‌ಐವಿ-ಏಡ್ಸ್ ಕುರಿತು ಜನನಿ ಕಲಾ ತಂಡದಿಂದ ಬೀದಿ ನಾಟಕ ಪ್ರದರ್ಶನಗೊಂಡಿತು.
Published on

ಕೂಡ್ಲಿಗಿ: ಸಾರ್ವಜನಿಕರು ಎಚ್‌ಐವಿ-ಏಡ್ಸ್ ಬಗ್ಗೆ ಜಾಗ್ರತೆಯಿಂದಿದ್ದು ಸುಸ್ಥಿರ ಜೀವನ ನಡೆಸಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಬಣಕಾರ ಗಿರೀಶ್ ಹೇಳಿದರು.

ಮದಕರಿ ವೃತ್ತದಲ್ಲಿ ಶನಿವಾರ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಬಳ್ಳಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಏಡ್ಸ್ ಜಾಗೃತಿ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ಷಣಿಕ ಸುಖಕ್ಕಾಗಿ ಎಚ್‌ಐವಿ-ಏಡ್ಸ್‌ನಂತಹ ಮಾರಕ ಕಾಯಿಲೆಗೆ ತುತ್ತಾಗದಂತೆ ಎಚ್ಚರ ವಹಿಸಬೇಕು. ಯುವಜನತೆ ಹೆಚ್ಚು ಜಾಗ್ರತೆ ವಹಿಸುವ ಜತೆಗೆ ಸೋಂಕಿನ ಕುರಿತು ಇತರರಿಗೂ ಅರಿವು ಮೂಡಿಸಬೇಕು ಎಂದರು.
ಅಸುರಕ್ಷಿತ ಲೈಂಗಿಕ ಸಂಪರ್ಕ, ಸೋಂಕಿತರಿಗೆ ಚುಚ್ಚಿದ ಸೂಜಿ ಅಥವಾ ಸಿರಿಂಜ್‌ಗಳ ಮರು ಬಳಕೆಯಿಂದ ಏಡ್ಸ್ ಹರಡುತ್ತದೆ. ಸಲಿಂಗಕಾಮದಿಂದಲೂ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಓರ್ವ ಸಂಗಾತಿ ಜತೆ ದೈಹಿಕ ಸಂಪರ್ಕ ಹೊಂದುವ ಮೂಲಕ ಸೋಂಕಿನಿಂದ ದೂರ ಇರಬೇಕು. ಸಮುದಾಯದಲ್ಲೂ ರೋಗದ ಬಗ್ಗೆ ತಿಳಿವಳಿಕೆ ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ಜನನಿ ಕಲಾ ತಂಡ ಏಡ್ಸ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿತು. ತಾಲೂಕು ಸಾರ್ವಜನಿಕ ಆಸ್ಪತ್ರೆ ಐಸಿಟಿಸಿ ಆಪ್ತ ಸಮಾಲೋಚಕ ಕೆ. ಪ್ರಶಾಂತ ಕುಮಾರ್, ಸಿಬ್ಬಂದಿ ರಾಘವೇಂದ್ರ, ತಿಪ್ಪೇಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net