ಬಯಲು ಶೌಚದಿಂದ ದುಷ್ಪರಿಣಾಮ

ಕಂಪ್ಲಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ಆಯೋಜಿಸಿದ್ದ ಶೌಚಗೃಹ ನಿರ್ಮಾಣ, ಬಳಕೆ ಕುರಿತ ಸೃಜನಶೀಲ ಕಾರ್ಯಕ್ರಮಕ್ಕೆ ಟ್ರಸ್ಟ್ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಚಾಲನೆ ನೀಡಿದರು. ಪ್ರಮುಖರಾದ ಎಲ್.ರಾಘವೇಂದ್ರ, ರೇಖಾ, ಮಂಜುನಾಥ, ಬನಶಂಕರಿ, ಶೈಲಜಾ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಅನಿಸಿಕೆ
  • ಕಂಪ್ಲಿ ಶೌಚಗೃಹ ನಿರ್ಮಾಣ, ಬಳಕೆ ಕುರಿತ ಕಾರ್ಯಕ್ರಮ
ಕಂಪ್ಲಿ: ಶೌಚಗೃಹ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಆರೋಗ್ಯವಾಗಿರಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.
ಪಟ್ಟಣದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಶೌಚಗೃಹ ನಿರ್ಮಾಣ, ಬಳಕೆ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಶೌಚ ಪದ್ಧತಿ ಇನ್ನೂ ಜೀವಂತವಿದ್ದು, ಅದರಿಂದ ಹೊರಬರಬೇಕಿದೆ. ಬಯಲು ಶೌಚದಿಂದ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿದೆ. ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಂಡು ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ ಎಂದರು.
ಜ್ಞಾನವಿಕಾಸ ಕೇಂದ್ರದ 20 ಸದಸ್ಯರಿಗೆ ಶೌಚಗೃಹದ ಬೇಸನ್ ಖರೀದಿಗೆ ತಲಾ 500 ರೂ. ಅನುದಾನ ಮಂಜೂರಾತಿ ಪತ್ರ ವಿತರಿಸಲಾಯಿತು. ತಾಲೂಕು ಯೋಜನಾಧಿಕಾರಿ ಎಲ್.ರಾಘವೇಂದ್ರ, ಸಮನ್ವಯಾಧಿಕಾರಿ ರೇಖಾ, ಮೇಲ್ವಿಚಾರಕರಾದ ಮಂಜುನಾಥ್, ಸದಸ್ಯರಾದ ಬನಶಂಕರಿ, ಶೈಲಜಾ, ಮೀನಾಕ್ಷಿ, ಸುನೀತಾ, ಮುಮ್ತಾಜ್, ಶಮೀನಾಬೇಗಂ, ಸೇವಾಪ್ರತಿನಿಧಿಗಳು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net