ಕುಡಿತದಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ

ಹರಪನಹಳ್ಳಿ ಸಮೀಪದ ದೇವರ ತಿಮ್ಮಾಲಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರ ಕಾರ್ಯಕ್ರಮವನ್ನು ಡಿವೈಎಸ್‌ಪಿ ಸಂತೋಷ್ ಚೌವ್ಹಾಣ್ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಗಣಪತಿ ಭಟ್, ಸಂಘದ ಸದಸ್ಯರಾದ ಅರುಣ್, ಶಾರದಾ, ಎಸ್.ಬಿ.ಲಿಂಬ್ಯಾನಾಯ್ಕಾ, ಮಮತಾ, ಬಿ.ನಾಗರಾಜ್, ಟಿ.ಕುಮಾರ, ಎನ್.ರಂಜಿತಾ, ರುದ್ರಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್‌ಪಿ ಸಂತೋಷ್ ಚೌವ್ಹಾಣ್ ಹೇಳಿಕೆ
  • ಮದ್ಯವರ್ಜನ ಶಿಬಿರ
ಹರಪನಹಳ್ಳಿ: ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕುಡಿತದಿಂದ ಅಹಿತಕರ ಘಟನೆಗಳಿಗೆ ನಡೆಯುತ್ತಿವೆ ಎಂದು ಡಿವೈಎಸ್‌ಪಿ ಸಂತೋಷ್ ಚೌವ್ಹಾಣ್ ಹೇಳಿದರು.
ನಗರದ ಹೊರ ವಲಯದ ದೇವರ ತಿಮ್ಮಾಲಪುರ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೌಟುಂಬಿಕ ಕಲಹ, ಖಿನ್ನತೆ, ಜಿಗುಪ್ಸೆ, ಸೇರಿ ವಿವಿಧ ಕಾರಣದಿಂದ ಯುವಕರು ಕುಡಿತಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಕೊಲೆ ಮತ್ತು ದರೋಡೆಯಂಥ ಅಪರಾಧ ಹೆಚ್ಚುತ್ತಿವೆ. ವ್ಯಸನ ಮುಕ್ತಗೊಳಿಸುವ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು. ಯೋಗ ಶಿಕ್ಷಕಿ ಕುಸುಮಾ ಜಗದೀಶ್ ಮಾತನಾಡಿ, ಮದ್ಯವರ್ಜನ ಶಿಬಿರ ಕುಟುಂಬ ಕಟ್ಟುವ ಕಾರ್ಯವಾಗಿದ್ದು, ಹೆಣ್ಣು ಮಕ್ಕಳ ಕಣ್ಣೀರು ಒರೆಸುತ್ತದೆ. ಸಾಮಾಜಿಕ ಬದಲಾವಣೆಗೆ ಮದ್ಯವರ್ಜನ ಶಿಬಿರ ಸಹಕಾರಿ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಗುಂಡಗತ್ತಿ ಮಂಜುನಾಥ, ಮಧ್ಯವರ್ಜನ ಶಿಬಿರದ ಸಮಿತಿ ಅಧ್ಯಕ್ಷ ಸಾಸ್ವಿಹಳ್ಳಿ ಎಂ.ಪಿ.ಹಾಲೇಶ್, ಪ್ರಮುಖರಾದ ಗುಡಿಹಳ್ಳಿ ಹಾಲೇಶ್, ಪ್ರವೀಣ್ ಕುಮಾರ್, ಕೆ.ಎನ್.ಸಿದ್ದೇಶ್, ಬೂದಿಹಾಳ್, ಮಾದಪುರ ನೀಲಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net