ಒನ್ ಹೆಲ್ತ್ ಪರಿಕಲ್ಪನೆ ಅಳವಡಿಸಿಕೊಳ್ಳಿ

ಬಳ್ಳಾರಿಯ ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಝೂನೋಸಿಸ್ ಜಾಗೃತಿ ದಿನ ಕಾರ್ಯಕ್ರಮವನ್ನು ಸಾಂಕ್ರಾಮಿಕ ರೋಗ ತಜ್ಞೆ ಡಾ.ವಿಶಾಲಕ್ಷಿ ಉದ್ಘಾಟಿಸಿದರು. ವೈದ್ಯಾಧಿಕಾರಿಗಳಾದ ಡಾ.ಸುಧಾರಾಣಿ, ಡಾ.ವಿಭ, ವಿ.ಪಿ.ಶಿವಾನಂದ, ಪ್ರಾಂಶುಪಾಲ ಹರಿಕೃಷ್ಣ, ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ. ಸದಾಶಿವ, ಸಹಾಯಕ ನಿರ್ದೇಶಕ ಡಾ. ಶ್ರೀನಿವಾಸ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಣಿಜನ್ಯ ರೋಗಗಳ ತಡೆಗೆ ಜಾಗೃತಿ
ಬಳ್ಳಾರಿ : ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯವನ್ನು ಸಮನ್ವಯಗೊಳಿಸುವ ಒನ್ ಹೆಲ್ತ್ ಪರಿಕಲ್ಪನೆ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಸರ್ವೇಕ್ಷಣಾ ಘಟಕದ ಸಾಂಕ್ರಾಮಿಕ ರೋಗ ತಜ್ಞೆ ಡಾ.ವಿಶಾಲಕ್ಷಿ ಹೇಳಿದರು.
ನಗರದ ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ, ಪಶುಸಂಗೋಪನೆ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ವಿಶ್ವ ಝೂನೋಸಿಸ್ ಜಾಗೃತಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಣಿಜನ್ಯ ರೋಗಗಳ ತಡೆಗೆ ಜಾಗೃತಿ ಅಗತ್ಯವಾಗಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳ (ಝೂನೋಟಿಕ್ ಕಾಯಿಲೆಗಳು) ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು. ಪ್ರಾಣಿಗಳಿಂದ ಮುಂತಾದ ಕಾಯಿಲೆಗಳು ಹರಡದಂತೆ ತಡೆಯಲು ಸ್ವಚ್ಛತೆ, ಸುರಕ್ಷಿತ ಆಹಾರ ಪದ್ಧತಿ ಹಾಗೂ ಸಾಕುಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆ ಹಾಕುವುದು ಅತ್ಯಗತ್ಯ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net