ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಜಿ.ಪಂ.ಮಾಜಿ ಸದಸ್ಯ ಎಚ್.ಭೀಮಜ್ಜ, ಜಿ.ತಿಮ್ಮಣ್ಣ, ತಳವಾರ ಹುಲುಗಪ್ಪ, ಟಿ.ಕೊಟ್ರೇಶ, ಶಿವನಾಗಪ್ಪ, ಕೆ.ನಾಗಪ್ಪ, ಡಿ.ಹನುಮಂತಪ್ಪ, ಕೆ.ಹುಲುಗಪ್ಪ, ಮಡಿವಾಳ ಮಾಚಿದೇವ ಸಂಘದ ತಾಲೂಕು ಅಧ್ಯಕ್ಷ ರಾಮಣ್ಣ, ಕಾರ್ಯದರ್ಶಿ ಪ್ರಕಾಶ, ಶ್ರೀನಿವಾಸ್ ಇತರರಿದ್ದರು.
ಹಗರಿಬೊಮ್ಮನಹಳ್ಳಿ: ಹಂಪಾಪಟ್ಟಣದಲ್ಲಿ ಮಡಿವಾಳ ಸಮುದಾಯದಿಂದ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಜಿಪಂ ಮಾಜಿ ಸದಸ್ಯ ಎಚ್.ಭೀಮಪ್ಪ ಮಾತನಾಡಿ, ಶರಣ ಮಡಿವಾಳ ಮಾಚಿದೇವ ಅವರ ಕಾಯಕ ನಿಷ್ಠೆ, ಮಾನವೀಯ ಮೌಲ್ಯಗಳು ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.