ಮನೆಗಳ್ಳತನ ಆರೋಪಿ ಬಂಧನ

ಸುಮನ್ ಡಿ.ಪನ್ನೇಕರ್
ಸುಮನ್ ಡಿ.ಪನ್ನೇಕರ್
Published on

ಪ್ರಮುಖ ಮುಖ್ಯಾಂಶಗಳು

  • 40ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿ

ಬಳ್ಳಾರಿ :

ನಗರದ ಕೌಲ್‌ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣದಡಿ ಆರೋಪಿಯನ್ನು ಬಂಧಿಸಿ, 23.20 ಲಕ್ಷ ರೂ. ಮೌಲ್ಯದ 110 ಗ್ರಾಂ ಚಿನ್ನಾಭರಣ ಹಾಗೂ 10 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಸುಮನ್ ಡಿ.ಪನ್ನೇಕರ್ ತಿಳಿಸಿದರು.

ನಗರದ ಎಸ್ಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರಿಮಾರೆಮ್ಮ ಕಾಲನಿ ನಿವಾಸಿ ಹನುಮಂತ ಬಂಧಿತ. ಆರೋಪಿಯೂ ವಿಚಾರಣೆ ವೇಳೆ ನಗರದ ಗೋಲ್ಡ್ ಸ್ಮಿತ್, ಕೆಎಚ್‌ಬಿ ಕಾಲನಿ, ಆರ್‌ಕೆ ಕಾಲನಿ ಹಾಗೂ ಗದಗ ಜಿಲ್ಲೆಯ ಮುಂಡರಗಿ ಠಾಣೆ ವ್ಯಾಪ್ತಿಯ ಲಿಂಗರಾಜು ನಗರದಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದರು.

ಈಗಾಗಲೇ ಆರೋಪಿಯೂ 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೌಲ್‌ಬಜಾರ್, ಎಪಿಎಂಸಿ, ಗಾಂಧಿನಗರ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹಡಗಲಿ, ಹಿರಿಯೂರು, ಪರಶುರಾಮಪುರ, ಚಳ್ಳಕೆರೆ, ಜಗಳೂರು, ಬೆಂಗಳೂರಿನ ಉಪ್ಪಾರಪೇಟೆ, ಸಿಟಿ ರೈಲ್ವೆ, ಬಾಗೇಪಲ್ಲಿ ಹಾಗೂ ಆಂಧ್ರಪ್ರದೇಶದ ಚಿತ್ತೂರು ಟೂಟೌನ್ ಠಾಣೆಗಳಲ್ಲೂ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಆರೋಪಿಗೆ ತನಿಖೆಗೆ ಹಾಜರಾಗಲು ಆ.12 ಮತ್ತು ಆ.16ರಂದು ನೋಟಿಸ್ ನೀಡಲಾಗಿತ್ತು. ಹಾಜರಾಗದ ಹಿನ್ನಲೆ ಆತನ ಚಲನವಲನದ ಮೇಲೆ ನಿಗಾ ವಹಿಸಲಾಗಿತ್ತು. ಆ.19ರಂದು ನಗರದ ವಾಲ್ಮೀಕಿ ಭವನದ ಬಳಿ ಬೆಂಗಳೂರಿಗೆ ಬಸ್‌ನಲ್ಲಿ ಪರಾರಿಗೆ ಯತ್ನಿಸಿದ ವೇಳೆ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net