ಆರೋಪಿ ಬಂಧನ, 13 ಬೈಕ್ ವಶ

ಬಳ್ಳಾರಿಯ ಗಾಂಧಿನಗರ ಪೊಲೀಸರ ಠಾಣೆಯಲ್ಲಿ ವಶಪಡಿಸಿಕೊಂಡ ಬೈಕ್‌ಗಳು ಸರತಿಯಲ್ಲಿ ಇಟ್ಟಿರುವುದು.
ಬಳ್ಳಾರಿಯ ಗಾಂಧಿನಗರ ಪೊಲೀಸರ ಠಾಣೆಯಲ್ಲಿ ವಶಪಡಿಸಿಕೊಂಡ ಬೈಕ್‌ಗಳು ಸರತಿಯಲ್ಲಿ ಇಟ್ಟಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಆರೋಪಿ
ಬಳ್ಳಾರಿ : ನಗರದ ನಾನಾ ಕಡೆ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧ ಆರೋಪಿಯನ್ನು ಬಂಧಿಸಿ, 6.05 ಲಕ್ಷ ರೂ. ಮೌಲ್ಯದ 13 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಆಂಧ್ರದ ಮಾಚನೂರು ನಿವಾಸಿ ವಲಸೆ ರಾಜ ಬಂಧಿತ ಆರೋಪಿ. ಇಲ್ಲಿನ ಗಾಂಧಿನಗರ, ಬ್ರೂಸ್‌ಪೇಟೆ ಹಾಗೂ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ. ಒಟ್ಟಾರೆ ನಾನಾ ಕಂಪನಿಯ 13 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net