1.59 ಲಕ್ಷ ಹೆಕ್ಟೇರ್ ಗುರಿ : ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 1,59,546 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ಪೈಕಿ ಭತ್ತ 87,741 ಹೆಕ್ಟೇರ್, ಮೆಕ್ಕಜೋಳ 26,000 ಹೆಕ್ಟೇರ್, ಹತ್ತಿ 20,000 ಹೆಕ್ಟೇರ್, ಸಜ್ಜೆ 10,000 ಹೆಕ್ಟೇರ್, ತೊಗರಿ 7,224 ಹೆಕ್ಟೇರ್ ಹಾಗೂ ಶೇಂಗಾ 1,500 ಹೆಕ್ಟೇರ್ ಸೇರಿದಂತೆ ಇತರೆ ಬೆಳೆಗಳ ಬಿತ್ತನೆಗೆ ವಿಸ್ತೀರ್ಣ ನಿಗದಿಪಡಿಸಲಾಗಿದೆ.