ಎಸಿ ಸ್ಥಳ ಪರಿಶೀಲನೆ

ಸಿರಿಗೇರಿ ಗ್ರಾಮದ ಬಸವನಪೇಟೆಗೆ ಎಸಿ ಎಚ್.ಡಿ.ರಾಜೇಶ್ ಅವರು ಭೇಟಿ ನೀಡಿ ಸ್ಥಳ ಪರಿಶೀಲಿಸುವ ವೇಳೆ ಸ್ಥಳೀಯರೊಂದಿಗೆ ಮಾತಿನ ಚಕಮಕಿ ನಡೆಯಿತು. ತಹಸೀಲ್ದಾರ್ ಗೌಸಿಯಾ ಬೇಗಂ, ಗ್ರಾಮಸ್ಥರಾದ ಹನುಮಂತರಾಯ, ಹುಸೇನ್‌ಸಾಬ್, ಹೊನ್ನೂರಪ್ಪ, ಹುಸೇನ್‌ಬಾಷಾ, ನೆನಕ್ಕಿ ಮಾರೇಶ್, ಸೋಮು ನಾಯಕ, ಕೊಳ್ಳಿ ಯಲ್ಲಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪರಿಶೀಲನೆ
ಬಳ್ಳಾರಿ : ಕಂದಾಯ ಗ್ರಾಮವೆಂದು ಘೋಷಿಸುವ ಸಲುವಾಗಿ ಎಸಿ ಎಚ್.ಡಿ.ರಾಜೇಶ್, ತಹಸೀಲ್ದಾರ್ ಗೌಸಿಯಾ ಬೇಗಂ ಸ್ಥಳಕ್ಕ ಭೇಟಿ ನೀಡಿ ಪರಿಶೀಲಿಸುವ ವೇಳೆ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಮಾತಿನ ಚಕಮಕಿ ನಡೆಯಿತು.
ಎಸಿ ಎಚ್.ಡಿ.ರಾಜೇಶ್ ಮಾತನಾಡಿ, ಬಸವನಪೇಟೆ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಉದ್ದೇಶದಿಂದ ಪರಿಶೀಲನೆ ನಡೆಸುತ್ತಿದ್ದು, ಮನೆ ನಿರ್ಮಿಸಿ ವಾಸವಿರುವವರಿಗೆ ಮಾತ್ರ ಹಕ್ಕು ಪತ್ರ ನೀಡಲಾಗುವುದು. 5.80 ಎಕರೆ ಭೂಮಿಯೂ ಹಳ್ಳಿಮರದ ವೀರೇಶ ಎಂಬುವವರ ಹೆಸರಿನಲ್ಲಿದೆ. ಸಮೀಕ್ಷೆಯಂತೆ ಈಗಾಗಲೇ ಮನೆ ಕಟ್ಟಿಕೊಂಡು ವಾಸವಾಗಿರುವ 106 ಮನೆಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದು ಹೇಳಿದರು.
ಸ್ಥಳೀಯ ನಿವಾಸಿ ದೊಡ್ಡ ಬಸಪ್ಪ ಮಾತನಾಡಿ, ಹಳ್ಳಿಮರದ ವೀರೇಶ್ ಪದೇ ಪದೇ ಸ್ಥಳಕ್ಕೆ ಅಧಿಕಾರಿಗಳನ್ನ ಕರೆದುಕೊಂಡು ಬಂದು ದಿಕ್ಕು ತಪ್ಪಿಸುತ್ತಿದ್ದಾನೆ. ನಾವುಗಳು ಜಾಗ ಖರೀದಿ ಮಾಡಿಕೊಂಡು 40 ವರ್ಷವಾದರೂ ನಾವು ಮನೆಯನ್ನು ಕಟ್ಟಿಕೊಳ್ಳಲು ಆರ್ಥಿಕವಾಗಿ ಶಕ್ತರಾಗದೇ ಅಪೂರ್ಣವಾಗಿ ಮಾಡಿಕೊಂಡಿದ್ದೇವೆ. ಇಂತಹ ಸಮಯದಲ್ಲಿ ಬಂದು ನಮಗೆ ಕಿರುಕುಳ ಕೊಡುತ್ತಿರುವುದು ಸರಿಯಲ್ಲ ಎಂದು ಅಳಲು ತೋಡಿಕೊಂಡರು. ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳ ನಡುವೆ ಮಾತಿನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net