ಹೂವಿನಹಡಗಲಿ ಸಿಡಿಪಿಒ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮವನ್ನು ಜೆಎಂಎಫ್‌ಸಿ ನ್ಯಾಯಾಧೀಶೆ ಟಿ.ಅಕ್ಷತಾ ಉದ್ಘಾಟಿಸಿದರು. ಸಿಡಿಪಿಒ ರಾಮನಗೌಡ, ವಕೀಲ ಹನುಮಂತಪ್ಪ ಗದುಗಿನ, ಸರ್ಕಾರಿ ಸಹಾಯಕ ಅಭಿಯೋಜಕ ಕೆ.ಅಜ್ಜಯ್ಯ, ತಾಲೂಕು ಆಯುಷ್ ವೈದ್ಯಾಧಿಕಾರಿ ಕೊಟ್ರಮ್ಮ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಉತ್ತಮ ಶಿಕ್ಷಣ
ಹೆಣ್ಣಿಗೆ ಹೆಣ್ಣೇ ಸ್ಫೂರ್ತಿ
ಹೂವಿನಹಡಗಲಿ: ತೊಟ್ಟಿಲು ತೂಗುವ ಕೈಯಿಗೆ ಉತ್ತಮ ಶಿಕ್ಷಣ ನೀಡಿದರೆ ದೇಶವನ್ನೂ ಆಳುತ್ತದೆ ಎಂದು ಜೆಎಂಎಫ್‌ಸಿ ನ್ಯಾಯಾಧೀಶೆ ಟಿ.ಅಕ್ಷತಾ ಹೇಳಿದರು.
ಪಟ್ಟಣದ ಸಿಡಿಪಿಒ ಕಚೇರಿ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೂರ್ವಜರು ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಹೇಳುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದ್ದು, ಹೆಣ್ಣಿಗೆ ಹೆಣ್ಣೇ ಸ್ಫೂರ್ತಿ. ಪ್ರತಿಯೊಬ್ಬ ಯಶಸ್ವಿ ಸ್ತ್ರೀಯ ಹಿಂದೆ ಒಬ್ಬ ಪುರುಷನಿದ್ದಾನೆ. ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿದ್ದಾರೆ. ಹೆಣ್ಣು ಮಗು ಜನಿಸಿದರೆ ಸಂಕಟ ಪಡುತ್ತಿದ್ದ ಕಾಲ ದೂರವಾಗಿದೆ. ಸಮಾಜ ಬಲವರ್ಧನೆ ಆಗಬೇಕಾದರೆ ಮಹಿಳೆಯರು ಒಗ್ಗೂಡುವುದು ಅಗತ್ಯ ಎಂದರು.
ಸಿಡಿಪಿಒ ರಾಮನಗೌಡ, ವಕೀಲ ಹನುಮಂತಪ್ಪ ಗದುಗಿನ, ಸರ್ಕಾರಿ ಸಹಾಯಕ ಅಭಿಯೋಜಕ ಕೆ.ಅಜ್ಜಯ್ಯ, ತಾಲೂಕು ಆಯುಷ್ ವೈದ್ಯಾಧಿಕಾರಿ ಕೊಟ್ರಮ್ಮ, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕಿ ಜ್ಯೋತಿ ಇತರರಿದ್ದರು.