ಮರ ಬಿದ್ದ ಪರಿಣಾಮ ಪಾರ್ಕಿಂಗ್ ಸ್ಥಳದಲ್ಲಿದ್ದ ಬೈಕ್‌ಗಳು ಜಖಂ ಅಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬುಧವಾರ ಬೆಳಗ್ಗೆ ಪಾಲಿಕೆಯಿಂದ ಮರ ತೆರವು ಕಾರ್ಯಾಚರಣೆ ನಡೆಯಿತು. ಬೈಕ್‌ಗಳಿಗೆ ರಕ್ಷಣೆಗೆ ಕೊಡುವುದಷ್ಟೇ ನಮ್ಮ ಜವಾಬ್ದಾರಿ, ಪ್ರಕೃತಿ ವಿಕೋಪದಿಂದ ಅದ ನಷ್ಟಕ್ಕೆ ಸಂಬಂಧವಿಲ್ಲ ಎಂಬುದಾಗಿ ಪಾರ್ಕಿಂಗ್ ಗುತ್ತಿಗೆ ಪಡೆದ ಸಿಬ್ಬಂದಿ ಬೈಕ್ ಮಾಲೀಕರಿಗೆ ತಿಳಿಸಿದ್ದಾರೆ.