ದೇಹ -ಮನಸ್ಸು ನಿಗ್ರಹಿಸುವ ಸಾಧನ

ಹರಪನಹಳ್ಳಿಯಲ್ಲಿ ತೆಗ್ಗಿನಮಠದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭವನ್ನು ತೆಗ್ಗಿನಮಠದ ಪೀಠಾಧ್ಯಕ್ಷ ವರಸದ್ಯೋಜಾತ ಸ್ವಾಮೀಜಿ ಉದ್ಘಾಟಿಸಿದರು. ಜನನಿ ಸಂಸ್ಥೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಉದಯಶಂಕರ ಭಟ್, ಟಿಎಂಎಇ  ಸಂಸ್ಥೆಯ ಔಷಧಾಲಯ ಕಾಲೇಜು ಪ್ರಾಚಾರ್ಯ ನಾಗೇಂದ್ರ ರಾವ್, ಉಪ ಪ್ರಾಚಾರ್ಯ ಇಟಗಿ ಷಣ್ಮುಖಪ್ಪ, ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ವೈದ್ಯರಾದ ಅನಿಶಾ, ದೀಪಾ ಬಣಕಾರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕೇವಲ
  • ದೈಹಿಕ
  • ವ್ಯಾಯಾಮವಲ್ಲ
ಹರಪನಹಳ್ಳಿ: ಮನುಕುಲ ಆರೋಗ್ಯವಾಗಿರಲು ಯೋಗ ಅವಿಭಾಜ್ಯ ಅಂಗವಾಗಬೇಕು ಎಂದು ತೆಗ್ಗಿನಮಠ ಪೀಠಾಧ್ಯಕ್ಷ ವರಸದ್ಯೋಜಾತ ಸ್ವಾಮೀಜಿ ಹೇಳಿದರು.
ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಹಾಗೂ ತೆಗ್ಗಿನ ಮಠದ ಸಹಯೋಗದಲ್ಲಿ ಶನಿವಾರ ತೆಗ್ಗಿನಮಠದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಭಾರತ ವಿಶ್ವಕ್ಕೆ ಯೋಗವನ್ನು ಕೊಡುಗೆಯಾಗಿ ನೀಡಿದೆ. ಯೋಗ ಎನ್ನುವುದು ಕೇವಲ ದೈಹಿಕ ವ್ಯಾಯಾಮವಲ್ಲ. ಅದು ದೇಹ ಮತ್ತು ಮನಸ್ಸನ್ನು ನಿಗ್ರಹಿಸುವ ಸಾಧನವಾಗಿದೆ.
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಹೀಗೆ ಅಷ್ಟಾಂಗ ಯೋಗದ ಮೂಲಕ ಜೀವನ ಸಾಕ್ಷಾತ್ಕಾರ ಸಾಧ್ಯ ಎನ್ನುವುದನ್ನು ನಮ್ಮ ಋಷಿ ಪರಂಪರೆ ತೋರಿಸಿಕೊಟ್ಟಿದೆ ಎಂದರು.
ಟಿಎಂಎಇ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಮಾತನಾಡಿ, ಸ್ವಾಸ್ಥ ಸಮಾಜದ ನಿರ್ಮಾಣಕ್ಕೆ ಋಷಿ ಮುನಿಗಳ ಕೊಡುಗೆ ಅಪಾರವಾಗಿದೆ. ಯೋಗದ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ವೈದ್ಯಪದ್ಧತಿಯನ್ನು ಭಾರತ ವಿಶ್ವಕ್ಕೆ ಪರಿಚಯಿಸಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗದ ಕೊಡುಗೆ ಅಪಾರ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net