ನೋಡುಗರನ್ನು ನಿಬ್ಬೆರಗಾಗಿಸುವ ಪ್ರತಿಮೆ

ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಯಿತು. ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಉಪ ತಹಸೀಲ್ದಾರ್ ಮದ್ದಲೇಟಿ, ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಬಡಿಗೇರ್ ನಾಗರಾಜ, ಪ್ರಮುಖರಾದ ವಿರುಪಾಪುರ ಚಂದ್ರಚಾರಿ, ಲಕ್ಷ್ಮಣಾಚಾರಿ, ಶ್ರೀಧರಾಚಾರಿ, ಎ.ಮಂಜುನಾಥ, ಸಿಡೇಗಲ್ಲು ಬಸವರಾಜ ಇತರರಿದ್ದರು.
ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಯಿತು. ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಉಪ ತಹಸೀಲ್ದಾರ್ ಮದ್ದಲೇಟಿ, ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಬಡಿಗೇರ್ ನಾಗರಾಜ, ಪ್ರಮುಖರಾದ ವಿರುಪಾಪುರ ಚಂದ್ರಚಾರಿ, ಲಕ್ಷ್ಮಣಾಚಾರಿ, ಶ್ರೀಧರಾಚಾರಿ, ಎ.ಮಂಜುನಾಥ, ಸಿಡೇಗಲ್ಲು ಬಸವರಾಜ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಾಸ್ತುಶಿಲ್ಪ
  • ಕೊಡುಗೆ ಅಪಾರ

ನೋಡುಗರನ್ನು ನಿಬ್ಬೆರಗಾಗಿಸುವ ಪ್ರತಿಮೆ

ಕೂಡ್ಲಿಗಿ: ದೇಶದ ಕಲೆ, ವಾಸ್ತುಶಿಲ್ಪಕ್ಕೆ ಅಮರ ಶಿಲ್ಪಿ ಜಕಣಾಚಾರಿ ಕೊಡುಗೆ ಅಪಾರ ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದಿಂದ ಗುರುವಾರ ಹಮ್ಮಿಕೊಂಡಿದ್ದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಮರಶಿಲ್ಪಿ ಜಕಣಾಚಾರಿ ಅವರು ನಿರ್ಮಿಸಿರುವ ಬೇಲೂರು, ಹಳೇಬೀಡು ದೇವಾಲಯಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವುದು ದೇಶದ ಶ್ರೀಮಂತ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಕಲ್ಲಿನ ಪ್ರತಿಮೆಗಳು ನೋಡುಗರನ್ನು ನಿಬ್ಬೆರಗಾಗಿಸುವಂತೆ ಮಾಡಿದೆ. ಇಂಥ ಕಲೆ, ವಾಸ್ತುಶಿಲ್ಪದ ವೈಭವ ಮುಂದಿನ ಪೀಳಿಗೆಗೂ ತಿಳಿಸುವಂತಾಗಬೇಕು ಎಂದರು.
ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಬಡಿಗೇರ್ ನಾಗರಾಜ ಮಾತನಾಡಿ, ಮುಂದಿನ ಪೀಳಿಗೆಗೆ ಅಮರತ ಶಿಲ್ಪಿಯ ಇತಿಹಾಸ ತಿಳಿಯಲು ಪಠ್ಯಪುಸ್ತಕಗಳಲ್ಲಿ ಅವರ ಜೀವನ ಚರಿತ್ರೆ ಸೇರಿಸಬೇಕು. ಸಮಾಜ ರಾಜಕೀಯ, ಆರ್ಥಿಕವಾಗಿ ಹಿಂದುಳಿದಿದ್ದು, ಸ್ಥಳೀಯ ಆಡಳಿತ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಬೇಕು. ಸಮುದಾಯ ಭವನ ಸೇರಿದಂತೆ ಪಟ್ಟಣದ ಯಾವುದಾದರೂ ಒಂದು ವೃತ್ತಕ್ಕೆ ಅಮರ ಶಿಲ್ಪಿ ಜಕಣಾಚಾರಿ ಎಂದು ನಾಮಕರಣ ಮಾಡುವಂತೆ ತಿಳಿಸಿದರು.
ಉಪ ತಹಸೀಲ್ದಾರ್ ಮದ್ದಿಲೇಟಿ, ಕಂದಾಯ ಇಲಾಖೆ ಸಿಬ್ಬಂದಿ ವಾಸುದೇವ, ಮಂಜುನಾಥ, ಶ್ರೀನಿವಾಸ್ ಕೊಂಡಿ, ಮಂಜುಳಾ, ರಾಧಾ, ಪ್ರಮುಖರಾದ ವಿರುಪಾಪುರ ಚಂದ್ರಚಾರಿ, ಲಕ್ಷ್ಮಣಾಚಾರಿ, ಶ್ರೀಧರಾಚಾರಿ, ಎ.ಮಂಜುನಾಥ, ಸಿಡೇಗಲ್ಲು ಬಸವರಾಜ, ಕಾಟ್ರಹಳ್ಳಿ ಚನ್ನಬಸಪ್ಪ, ಹೆಗ್ಡಾಳ್ ಕೊಟ್ರೇಶ್ ಆಚಾರಿ, ಬಿ.ನಾಗರಾಜ, ಕಾಟೇರ ಹಾಲೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net