ಬಳ್ಳಾರಿಯಲ್ಲ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆಯ ನಿ. ಶಾಖಾಧೀಕ್ಷಕ ಎಂ.ಶಿವಾಜಿರಾವ್ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಸಮಾಜದ ಮುಖಂಡರಾದ ಯಶವಂತರಾವ್ ಜಗತಾಪ್, ವಿನೋದ್ ಎಂ. ಚವ್ಹಾಣ್, ಪ್ರಕಾಶ್ ರಾವ್, ನಾಗರಾಜ್ ರಾವ್, ದಿನೇಶ್ ನಲವಡೆ, ಯಲ್ಲಪ್ಪ ಘೋರ್ಪಡೆ, ಮುರಾರಿ ಜಾಧವ ಇತರರಿದ್ದರು.
ಬಳ್ಳಾರಿ : ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಬ್ಬ ರಾಜನಾಗಿರದೇ, ಭಾರತದ ರಾಷ್ಟಪುರುಷರಾಗಿ ಹಿಂದೂ ಸ್ವರಾಜ್ಯ ಸ್ಥಾಪಿಸಿದರು ಎಂದು ಪೊಲೀಸ್ ಇಲಾಖೆಯ ನಿ. ಶಾಖಾಧೀಕ್ಷಕ ಎಂ.ಶಿವಾಜಿರಾವ್ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿವಾಜಿ ಮಹಾರಾಜರ ಧೈರ್ಯ, ಬಾಲ್ಯದ ಶೌರ್ಯ ಮತ್ತು ಯುದ್ಧ ಕೌಶಲಗಳು ಇಂದಿಗೂ ಸ್ಫೂರ್ತಿಯಾಗಿದೆ. ದಾಸ್ಯ ಮತ್ತು ಗುಲಾಮತನದಿಂದ ದೇಶ ಮುಕ್ತಗೊಳಿಸಿ, ಪರಕೀಯರ ದಾಳಿಯಿಂದ ರಕ್ಷಿಸಿದ ಮಹಾನ್‌ಚೇತನರು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಗರದಲ್ಲಿ ವಿಜೃಂಭಣೆಯಿಂದ ಭವ್ಯ ಮೆರವಣಿಗೆ ನಡೆಯಿತು. ಬಳಿಕ ಮರಾಠ ಸ್ಪೋಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ‘ ಶ್ರೀಛತ್ರಪತಿ ಶಿವಾಜಿ ಮಹಾರಾಜ್ ಕಪ್-2026’ ವಿಜೇತರಿಗೆ ಬಹುಮಾನ ವಿತರಿಸಲಾಯಿತು.