ಕಾನಹೊಸಹಳ್ಳಿ: ಯಂಬಳಿ ವಡ್ಡರಹಟ್ಟಿಯಲ್ಲಿ ಮಂಗಳವಾರ ಸುರಿದ ಮಳೆ ಹಾಗೂ ಗಾಳಿಯಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳಿಗೆ ಹಾಕಿದ್ದ ಛಾವಣಿ ಶೀಟ್‌ಗಳು ಹಾರಿ ಹೋಗಿವೆ. ಆಗ ಕಟ್ಟಡದಲ್ಲಿ ಯಾರೂ ಇರಲಿಲ್ಲವಾದ್ದರಿಂದ ಯಾವುದೇ ಅನಾಹುತವಾಗಿಲ್ಲ.
ರೈತ ಚನ್ನಬಸಪ್ಪ ಅವರ ಕೋಳಿ ಫಾರ್ಮ್ ಶೆಡ್ ನೆಲಕ್ಕುರುಳಿದೆ. ಮಾರಪ್ಪ, ಗಂಗಪ್ಪ ಅವರ ಮನೆ ಮುಂಭಾಗದ ಶೀಟ್‌ಗಳು ಹಾರಿ ಹೋಗಿವೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಧರ್ಮೇಂದ್ರ ನಾಯ್ಕ ಹಾಗೂ ಗ್ರಾಪಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಯಂಬಳಿ ವಡ್ಡರಹಟ್ಟಿಯಲ್ಲಿ ರೈತ ಚನ್ನಬಸಪ್ಪ ಅವರ ಕೋಳಿಫಾರ್ಮ್ ಶೆಡ್ ಬಿದ್ದಿರುವುದು.