ಗೌರವಯುತ ಬದುಕಿಗೆ ನೆರವಾದ ಯೋಜನೆ

ತೆಕ್ಕಲಕೋಟೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನಿಂದ ಫಲಾನುಭವಿ ಹುಸೇನ್ ಬಿ ಅವರಿಗೆ ಕ್ಷೇತ್ರ ಯೋಜನಾಧಿಕಾರಿ ಎಸ್. ವಸಂತ್ ಅವರು ವಾಟರ್ ಬೆಡ್ ವಿತರಿಸಿದರು.
ತೆಕ್ಕಲಕೋಟೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನಿಂದ ಫಲಾನುಭವಿ ಹುಸೇನ್ ಬಿ ಅವರಿಗೆ ಕ್ಷೇತ್ರ ಯೋಜನಾಧಿಕಾರಿ ಎಸ್. ವಸಂತ್ ಅವರು ವಾಟರ್ ಬೆಡ್ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಶಕ್ತರು
  • ಅಂಗವಿಕಲರಿಗೆ
  • ಜನಮಂಗಲ
ಸಿರಿಗೇರಿ: ತೆಕ್ಕಲಕೋಟೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ನಿಂದ ಜನಮಂಗಲ ಕಾರ್ಯಕ್ರಮದಡಿ ಅಶಕ್ತರು ಮತ್ತು ವಿಕಲಚೇತನರಿಗೆ ಮಂಜೂರಾದ ವಾಟರ್ ಬೆಡ್ ಅನ್ನು ಫಲಾನುಭವಿ ಹುಸೇನಬೀ ಅವರಿಗೆ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ವಸಂತ ಎಸ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಯೋಜನೆಯಿಂದ ರಾಜ್ಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ವಿಶೇಷವಾಗಿ ಅಶಕ್ತರು ಹಾಗೂ ಅಂಗವಿಕಲರಿಗೆ ಜನಮಂಗಲ ಕಾರ್ಯಕ್ರಮದಡಿ ವೀಲ್‌ಚೇರ್, ಕಮೋಡ್ ಚೇರ್, ಯು ಸೇಫ್ ವಾಕರ್, ತ್ರೀ ಲೆಗ್ ಸ್ಟಿಕ್, ಸಿಂಗಲ್ ಲೆಗ್ ಸ್ಟಿಕ್, ವಾಟರ್ ಬೆಡ್ ಸೇರಿದಂತೆ ವಿವಿಧ ಸಲಕರಣೆಗಳನ್ನು ವಿತರಿಸಲಾಗುತ್ತಿದೆ.
ತಾಲೂಕಿನಲ್ಲಿ ಈವರೆಗೆ 38.50 ಲಕ್ಷ ರೂ. ಮೌಲ್ಯದ ಸಲಕರಣೆಗಳನ್ನು ವಿತರಿಸಲಾಗಿದೆ. ಗೌರವಯುತ ಬದುಕಿಗೆ ಈ ಯೋಜನೆ ನೆರವಾಗಿದೆ ಎಂದರು. ಪಟ್ಟಣ ಪಂಚಾಯಿತಿ ಸದಸ್ಯ ನಾಸಿರ್ ಹುಸೇನ್, ಪತ್ರಕರ್ತ ಖಾಜಾಮೊದ್ದಿನ್, ಸೇವಾ ಪ್ರತಿನಿಧಿ ಪರಿದಾಬಾನು, ಸಿ.ಎಸ್.ಸಿ ಸೇವಾದಾರ ಶ್ರೀನಿವಾಸ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net