ಕೈದಿಯೊಬ್ಬ ಪಿಯು ಪರೀಕ್ಷೆಗೆ ಹಾಜರು

ಕೈದಿಯೊಬ್ಬ ಪಿಯು ಪರೀಕ್ಷೆಗೆ ಹಾಜರು
ಕೈದಿಯೊಬ್ಬ ಪಿಯು ಪರೀಕ್ಷೆಗೆ ಹಾಜರು
Published on

ಪ್ರಮುಖ ಮುಖ್ಯಾಂಶಗಳು

  • ಸೆರೆವಾಸ
ಬಳ್ಳಾರಿ : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ಜೀವಾವಧಿ ಶಿಕ್ಷೆಯ ಕೈದಿಯೊಬ್ಬ ದ್ವಿತೀಯ ಪಿಯು ವಿಷಯಗಳ ಪರೀಕ್ಷೆಗೆ ಹಾಜರಾಗಿದ್ದಾರೆ.
ಬೆಂಗಳೂರು ಮೂಲದ 28 ವರ್ಷದ ಕೈದಿಯೊಬ್ಬ 2019ರ ನ.23ರಿಂದ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಈ ಮುಂಚೆ ಎಸ್‌ಎಸ್‌ಎಲ್‌ಸಿ ಪಾಸಾಗಿದ್ದ ಅವರು, ಶಿಕ್ಷಣ ಮುಂದುವರಿಸಲು ಬಯಸಿದ್ದರು. ಕಾರಾಗೃಹ ಇಲಾಖೆಯ ಅನುಮತಿ ಪಡೆದು ನಗರದ ಪರೀಕ್ಷಾ ಕೇಂದ್ರಯೊಂದರಲ್ಲಿ ದ್ವಿತೀಯ ಪಿಯು (ಕಲಾ ವಿಭಾಗ)ದ ವಿಷಯಗಳ ಪರೀಕ್ಷೆ ಬರೆಯುತ್ತಿದ್ದಾರೆ. ಕಾರಾಗೃಹ ಪೊಲೀಸ್ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಮತ್ತೆ ಜೈಲಿಗೆ ಮರಳುತ್ತಿದ್ದಾರೆ ಎಂದು ಕಾರಾಗೃಹ ಅಧಿಕಾರಿ ತಿಳಿಸಿದರು.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net