ರೂಪ ಬದಲಿಸಿ ಬೇಡಿಕೆ ಹೆಚ್ಚಿಸಿಕೊಂಡ ಮಡಕೆ

ಸಿರಗುಪ್ಪ ತಾಲೂಕು ಕ್ರೀಡಾಂಗಣದ ಬಳಿ ಮಡಕೆಗಳನ್ನು ಮಾರಾಟಕ್ಕೆ ಇಡುತ್ತಿರುವುದು.
ಸಿರಗುಪ್ಪ ತಾಲೂಕು ಕ್ರೀಡಾಂಗಣದ ಬಳಿ ಮಡಕೆಗಳನ್ನು ಮಾರಾಟಕ್ಕೆ ಇಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬಿಸಿಲ ಧಗೆ ತಣಿಸಲು ಮಣ್ಣಿನ ವಸ್ತುಗಳ ಮೊರೆ ಹೋದ ಜನರು
  • ಕುಂಬಾರ ವೃತ್ತಿಗೆ ಮರುಜೀವ
ಸಿರಗುಪ್ಪ: ಆಧುನಿಕತೆ ಭರಾಟೆಯಲ್ಲಿ ಹಿಂದಿನ ಕಾಲದ ಅನೇಕ ವಸ್ತುಗಳು ಮೂಲೆ ಗುಂಪಾಗುತ್ತಿದ್ದರೂ ಇತ್ತೀಚೆಗೆ ಮಣ್ಣಿನ ಮಡಕೆ ರೂಪ ಬದಲಾಯಿಸಿಕೊಂಡು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದಿವೆ.
ಪಟ್ಟಣದ ತಾಲೂಕು ಕ್ರೀಡಾಂಗಣ ಹತ್ತಿರ, ಆಭಯಾಂಜನೇಯ ದೇವಸ್ಥಾನದ ಬಳಿ, ಉಪನೋಂದಣಿ ಅಧಿಕಾರಿ ಕಚೇರಿ ಮುಂದೆ ಮಡಕೆಗಳನ್ನು ಮಾರಾಟ ಮಾಡಲಾಗುತ್ತಿದೆ. ರಾಯಚೂರು, ಮಾನ್ವಿ, ಸಿಂಧನೂರು, ಕಂಪ್ಲಿ ತಾಲೂಕಿನ ಹಳ್ಳಿಗಳು, ಕೂಡ್ಲಿಗಿಯ ಇಮ್ಡಾಪುರ ಮತ್ತು ಚೌಡಾಪುರದಿಂದ ಮಡಕೆ ಕೊಂಡು ತಂದು ಮಾರಾಟ ಮಾಡಲಾಗುತ್ತಿದೆ. ಪ್ರಸಕ್ತ ವರ್ಷ ತಾಲೂಕಿನಲ್ಲಿ ಬಿಸಿಲ ಧಗೆ ಹೆಚ್ಚುತ್ತಿರುವುದರಿಂದ ಬಹುತೇಕರು ಮಣ್ಣಿನ ಮಡಕೆಗಳ ಮೊರೆ ಹೋಗುತ್ತಿದ್ದಾರೆ. ಬೀದಿಬದಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.
ಆಧುನಿಕ ಯುಗದ ಬೇಡಿಕೆಗೆ ತಕ್ಕಂತೆ ಕುಂಬಾರರೂ ಮಣ್ಣಿನ ವಸ್ತುಗಳ ರೂಪ ಬದಲಾಯಿಸಿ ಮಾರಾಟ ಮಾಡುತ್ತಿದ್ದು, ಬೇಸಿಗೆ ದಾಹ ತೀರಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ. ವಿದ್ಯುತ್ ಚಿಂತೆಯಿಲ್ಲ, ಆರೋಗ್ಯದ ಸಮಸ್ಯೆಯಿಲ್ಲ ಎಂಬ ಕಾರಣಕ್ಕೆ ಆರೋಗ್ಯ ತಜ್ಞರು ಕೂಡ ಮಡಕೆ ನೀರು ಕುಡಿಯುವುದನ್ನು ಬೆಂಬಲಿಸುತ್ತಾರೆ. ಇದರಿಂದಾಗಿ ಕುಂಬಾರಿಕೆ ವೃತ್ತಿಗೆ ಮರುಜೀವ ಬಂದಂತಾಗಿದೆ.
"

ಅಳತೆಗೆ ತಕ್ಕಂತೆ ಪ್ರತಿ ಮಡಕೆಗೆ 150 ರೂ.ರಿಂದ 400 ರೂ.ವರೆಗೆ ನಿಗದಿಪಡಿಸಲಾಗಿದೆ. ಸಿರಗುಪ್ಪದಲ್ಲಿ ಮಡಿಕೆಗೆ ಬಹಳ ಬೇಡಿಕೆಯಿದೆ. ಇದರಿಂದ ಹೆಚ್ಚಿನ ಲಾಭವಿಲ್ಲದಿದ್ದರೂ ಪ್ರತಿವರ್ಷ ವ್ಯಾಪಾರ ಕೈಬಿಡದೆ ಕುಲ ಕಸುಬನ್ನು ಮುಂದುವರಿಸುತ್ತಿದ್ದೇವೆ.

"

ಗ್ರಾಮೀಣ ಭಾಗದ ಬಹುತೇಕ ಮನೆಗಳಲ್ಲಿ ಫ್ರಿಡ್ಜ್ ಬಳಸಲಾಗುತ್ತಿದೆ. ಆದರೆ, ನೀರಿನ ದಾಹ ತೀರದ ಹಿನ್ನೆಲೆಯಲ್ಲಿ ಮಣ್ಣಿನ ಮಡಕೆಗಳತ್ತ ಮಾರುಹೋಗುತ್ತಿರುವುದು ಸಾಮಾನ್ಯವಾಗಿದೆ. ಬಿಸಿಲಿನ ತಾಪಕ್ಕೆ ಹೊಸ ತಲೆಮಾರಿನವರೂ ಮಡಕೆಗಳ ಬಳಕೆಗೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net