ಸಿದ್ಧರಾಮಾನಂದ ಸ್ವಾಮೀಜಿಗೆ ನುಡಿನಮನ

ಕುರುಗೋಡಿನ ಕಲ್ಲುಗುಡೇಶ್ವರ ಆಲಯದಲ್ಲಿ ಕಾಗಿನೆಲೆ ಪೀಠದ ತಿಂಥಿಣಿ ಬ್ರಿಡ್ಜ್ ಶಾಖಾ ಮಠದ ಸಿದ್ಧರಾಮಾನಂದ ಸ್ವಾಮೀಜಿ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಗೋವರ್ಧನ ಸ್ವಾಮೀಜಿ, ಕಾಂಗ್ರೆಸ್ ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಕೆ ಮಲ್ಲಿಕಾರ್ಜುನ, ಸಾಮಾಜಿಕ ಕಾರ್ಯಕರ್ತ ಕಾಮೇಶ್, ತಹಸೀಲ್ದಾರ್ ನರಸಪ್ಪ ಇತರರಿದ್ದರು.
ಕುರುಗೋಡಿನ ಕಲ್ಲುಗುಡೇಶ್ವರ ಆಲಯದಲ್ಲಿ ಕಾಗಿನೆಲೆ ಪೀಠದ ತಿಂಥಿಣಿ ಬ್ರಿಡ್ಜ್ ಶಾಖಾ ಮಠದ ಸಿದ್ಧರಾಮಾನಂದ ಸ್ವಾಮೀಜಿ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಗೋವರ್ಧನ ಸ್ವಾಮೀಜಿ, ಕಾಂಗ್ರೆಸ್ ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಕೆ ಮಲ್ಲಿಕಾರ್ಜುನ, ಸಾಮಾಜಿಕ ಕಾರ್ಯಕರ್ತ ಕಾಮೇಶ್, ತಹಸೀಲ್ದಾರ್ ನರಸಪ್ಪ ಇತರರಿದ್ದರು.
Published on
ಕುರುಗೋಡು: ಹಿಂದುಳಿದ ಸಮುದಾಯಗಳನ್ನು ಒಗ್ಗೂಡಿಸುವ ಜತೆಗೆ ಜಾಗೃತಿ ಮೂಡಿಸುವಲ್ಲಿ ಸಿದ್ಧರಾಮಾನಂದ ಸ್ವಾಮೀಜಿ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದಾರೆ ಎಂದು ದಮ್ಮೂರು ಬನಶಂಕರಿ ಮಠದ ಗೋವರ್ಧನ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕಲ್ಲುಗುಡೇಶ್ವರ ಆಲಯದಲ್ಲಿ ಆಯೋಜಿಸಿದ್ದ ಕಾಗಿನೆಲೆ ಪೀಠದ ತಿಂಥಿಣಿ ಬ್ರಿಡ್ಜ್ ಶಾಖಾಮಠದ ಸಿದ್ಧರಾಮಾನಂದ ಸ್ವಾಮೀಜಿ ನುಡಿನಮನ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಸ್ವಾಮೀಜಿ ಅಗಲಿಕೆಯಿಂದ ದುಃಖ ಆವರಿಸಿದೆ. ಆದರೆ, ಅವರು ಭೀಷ್ಮರಂತೆ ಉತ್ತರಾಯಣದ ಪವಿತ್ರ ಕಾಲದಲ್ಲಿ ದೇಹ ತೊರೆದಿದ್ದಾರೆ. ಅವರ ಆಶಯ ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಜಿಲ್ಲಾ ಕಾಂಗ್ರೆಸ್ ಒಬಿಸಿ ವಿಭಾಗದ ಅಧ್ಯಕ್ಷ ಕೆ.ಮಲ್ಲಿಕಾರ್ಜುನ ಮಾತನಾಡಿ, ಸಮುದಾಯದ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದ ಸ್ವಾಮೀಜಿ ಅನಾರೋಗ್ಯದ ನಡುವೆಯೂ ಸಮಾಜ ಕಟ್ಟಲು ಶ್ರಮಿಸಿದರು. ಅವರ ಅಗಲಿಕೆ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದರು.
ಸಾಮಾಜಿಕ ಕಾರ್ಯಕರ್ತ ಕಾಮೇಶ್ ಮಾತನಾಡಿ, ಭಕ್ತರ ಕಾರ್ಪಣ್ಯಕ್ಕೆ ಕೈಲಾದ ನೆರವು ನೀಡುವ ಜತೆಗೆ ಶ್ರಾವಣಯಾತ್ರೆ, ಹಾಲುಮತ ಸಂಸ್ಕೃತಿ ಮೂಲಕ ಬುಡಕಟ್ಟು ಸಮುದಾಯವನ್ನು ಪ್ರೋತ್ಸಾಹಿಸಿದರು. ವಲಸೆ ಕಾರ್ಮಿಕ ಮಕ್ಕಳಿಗೆ ನಿಲಯ ಮತ್ತು ಶಾಲೆ ತೆರೆಯುವುದು ಅವರ ಆಶಯವಾಗಿತ್ತು ಎಂದರು. ತಹಸೀಲ್ದಾರ್ ನರಸಪ್ಪ ಮಾತನಾಡಿ, ಬಹುತ್ವದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದ ಸ್ವಾಮೀಜಿ ಪೂಜಾರಿ ತರಬೇತಿ, ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದರು. ಸಮಾಜದಿಂದ ದೂರ ಉಳಿದ ಬುಡಕಟ್ಟು ಜನರ ಕಲೆ, ಸಂಸ್ಕೃತಿ ಬೆಳಕಿಗೆ ತಂದು ಅವರ ಏಳಿಗೆಗಾಗಿ ಶ್ರಮಿಸಿದ್ದರು ಎಂದರು.
ಪ್ರಮುಖರಾದ ಮುರುಣ್ಣೆ ವೀರೇಶ, ಬಸವರಾಜ್, ಸಣ್ಣಬಸಪ್ಪ, ಕರೆಪ್ಪನವರ ಬಸವರಾಜ್, ವಿರುಪಾಪುರ ಬಸವರಾಜ್, ವದ್ದಟ್ಟಿ ಎರ‌್ರಿಸ್ವಾಮಿ, ಗುರುಬಸವರಾಜ್, ದೇವೇಂದ್ರಪ್ಪ, ಗವಿಯಪ್ಪ, ಧರ್ಮಣ್ಣ, ನಾಗಪ್ಪ, ನೆಣಿಕಿ ಬಸವರಾಜ್, ಅಮರೇಶ, ನಾಗೇಶ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net