ಪಾರಮಾರ್ಥ ಸಾಧನೆಯ ಸಂದೇಶ

ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ದೇವರ ದಾಸಿಮಯ್ಯ ಜಯಂತ್ಯುತ್ಸವ ಆಚರಿಸಲಾಯಿತು.
ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ದೇವರ ದಾಸಿಮಯ್ಯ ಜಯಂತ್ಯುತ್ಸವ ಆಚರಿಸಲಾಯಿತು.
Published on
ಕಂಪ್ಲಿ: ವಚನ ಸಾಹಿತ್ಯಕ್ಕೆ ಅದ್ಯ ವಚನಕಾರ ದೇವರ ದಾಸಿಮಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದು ದೇವಾಂಗ ಸಮಾಜದ ತಾಲೂಕು ಘಟಕದ ಮಾಜಿ ಕಾರ್ಯದರ್ಶಿ ಬಂಗಿ ದೊಡ್ಡ ಮಂಜುನಾಥ ಹೇಳಿದರು.
ತಹಸಿಲ್ ಕಚೇರಿ ಸಭಾಂಗಣದಲ್ಲಿ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಸೋಮವಾರ ಮಾತನಾಡಿದರು. ದೇವರ ದಾಸಿಮಯ್ಯ ರಚಿಸಿದ 176 ವಚನಗಳು ವಚನ ಸಾಹಿತ್ಯಕ್ಕೆ ಪ್ರೇರಣೆಯಾಗಿವೆ. ಲೌಕಿಕದಲ್ಲಿದ್ದುಕೊಂಡೇ ಪಾರಮಾರ್ಥ ಸಾಧಿಸಬೇಕೆಂಬುದನ್ನು ದೇವರ ದಾಸಿಮಯ್ಯ ವಚನಗಳ ಮೂಲಕ ಪ್ರತಿಪಾದಿಸಿದ್ದಾರೆ ಎಂದರು.
ಪದ್ಮಸಾಲಿ ಬಹೂತ್ತಮ ನೇಕಾರ ಸಮುದಾಯದ ತಾಲೂಕು ಪ್ರಧಾನ ಕಾರ್ಯದರ್ಶಿ ಜಗದೀಶ ಪೂಜಾರ್ ಮಾತನಾಡಿ, ದೇವರ ದಾಸಿಮಯ್ಯ ಅವರ ತತ್ವ-ಆದರ್ಶಗಳು ಸದಾ ಅನುಕರಣೀಯ. ಲಿಂಗ, ಜಾತಿ ಸಮಾನತೆ, ಕಾಯಕ ಶ್ರೇಷ್ಠತೆಗಾಗಿ ಅಹರ್ನಿಶಿ ಶ್ರಮಿಸಿದ್ದರು ಎಂದರು.
ತಹಸೀಲ್ದಾರ್ ಜೂಗಲ ಮಂಜುನಾಯಕ, ದೇವಾಂಗಮಠದ ಮಂಜುನಾಥಸ್ವಾಮಿ, ದೇವಾಂಗ ಸಮಾಜದ ತಾಲೂಕು ಅಧ್ಯಕ್ಷ ಸಪ್ಪರದ ರಾಘವೇಂದ್ರ, ನೇಕಾರ ಸಮುದಾಯ ಒಕ್ಕೂಟದ ತಾಲೂಕು ಅಧ್ಯಕ್ಷ ಪಿ.ಬ್ರಹ್ಮಯ್ಯ, ಕಾರ್ಯದರ್ಶಿ ಜಿ.ಸುಧಾಕರ, ಪ್ರಮುಖರಾದ ಗದ್ಗಿ ವಿರೂಪಾಕ್ಷಿ, ತುಳಸಿರಾಮಚಂದ್ರ, ವನಕಿ ಶಂಕರ್, ಪುಟ್ಟಿ ರಾಘವೇಂದ್ರ, ಪೋಡಿ ನಾರಾಯಣಪ್ಪ, ಜಿ.ಪಂಪಾಪತಿ, ತಾಲೂಕು ಮಟ್ಟದ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net