

ಪ್ರಮುಖ ಮುಖ್ಯಾಂಶಗಳು
ಕಂಪ್ಲಿ: ರಾಮಸಾಗರದಲ್ಲಿ ಬದುಕಿರುವ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಮೃತ ಎಂದು ದಾಖಲಿಸಿರುವುದು ಬೆಳಕಿಗೆ ಬಂದಿದೆ. ಗ್ರಾಮದ 1ನೇ ವಾರ್ಡ್‌ನ ಮತದಾರರ ಪಟ್ಟಿಯ ಆನೆ ಪ್ರಕಾಶ ಎಂಬಾತನನ್ನು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮೃತಪಟ್ಟಿದ್ದಾನೆಂದು ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿದೆ. ಆನೆ ಪ್ರಕಾಶ ಜೀವಂತವಾಗಿದ್ದು, ಸ್ವಂತ ನಿವಾಸದಲ್ಲಿಯೇ ವಾಸಿಸುತ್ತಿದ್ದಾರೆ. ಸ್ವತಃ ಅವರೇ ಆಧಾರ್ ಕಾರ್ಡ್ ತೋರಿಸಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿದ್ದಾರೆ.