ಸಂಭ್ರಮದಿಂದ ಜರುಗಿದ ಉರುಸು

ಕಂಪ್ಲಿಯಲ್ಲಿ ನಡೆದ ಉರುಸು ಕಾರ್ಯಕ್ರಮದಲ್ಲಿ ಧರ್ಮಗುರು ಸೈಯ್ಯದ್ ಷಾಹ್ ಖಾಜಾ ಮೈನುದ್ದೀನ್ ಖಾದ್ರಿ, ಶಾಸಕ ಜೆ.ಎನ್. ಗಣೇಶ್, ಎಂ. ಹುಸೇನ್ ಬಾಷಾ, ಕೆ. ಮಸ್ತಾನ್ ಸಾಬ್, ಅಬ್ದುಲ್ ಕರೀಮ್, ಅಕ್ಕಿ ಜಿಲಾನ್ ಇತರರು ಇದ್ದರು.
ಕಂಪ್ಲಿಯಲ್ಲಿ ನಡೆದ ಉರುಸು ಕಾರ್ಯಕ್ರಮದಲ್ಲಿ ಧರ್ಮಗುರು ಸೈಯ್ಯದ್ ಷಾಹ್ ಖಾಜಾ ಮೈನುದ್ದೀನ್ ಖಾದ್ರಿ, ಶಾಸಕ ಜೆ.ಎನ್. ಗಣೇಶ್, ಎಂ. ಹುಸೇನ್ ಬಾಷಾ, ಕೆ. ಮಸ್ತಾನ್ ಸಾಬ್, ಅಬ್ದುಲ್ ಕರೀಮ್, ಅಕ್ಕಿ ಜಿಲಾನ್ ಇತರರು ಇದ್ದರು.
Published on
ಕಂಪ್ಲಿ: ಪಟ್ಟಣದ ಎರಡನೇ ವಾರ್ಡ್‌ನಲ್ಲಿರುವ ಹಜರತ್ ಸೈಯ್ಯದ್ ಷಾಹ್ ಖಾಜಾಪೀರ್ ಮಹ್ಮದ್ ಷಾ ಹುಸೇನಿ ಉರುಫ್ ಖಾಜಮೀನ್ ಸಾಹೇಬರ 312ನೇ ಉರುಸು ಕಾರ್ಯಕ್ರಮ ಸೋಮವಾರ ಸಡಗರ-ಸಂಭ್ರಮದಿಂದ ಜರುಗಿತು. ಉರುಸು ನಿಮಿತ್ತ ದರ್ಗಾದಲ್ಲಿ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಗಂಗಾವತಿಯ ಬಾಗಿ ಸುಲ್ತಾನ್ ತಂಡದಿಂದ ಕವ್ವಾಲಿ ಗಾಯನ ನಡೆಯಿತು.
ಶಾಸಕ ಜೆ.ಎನ್. ಗಣೇಶ್ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಸೈಯ್ಯದ್ ಷಾಹ್ ಖಾಜಾ ಮೈನುದ್ದೀನ್ ಖಾದ್ರಿ, ಪೀರ್ ಮಹ್ಮದ್ ಷಾ ಹುಸೇನ್ ಕಮಿಟಿ ಅಧ್ಯಕ್ಷ ಎಂ. ಹುಸೇನ್ ಬಾಷಾ, ಗೌರವಾಧ್ಯಕ್ಷ ನ್ಯಾಮತ್ ಸಾಬ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ. ಮಸ್ತಾನ್ ಸಾಬ್, ಅಂಜುಮನ್ ಕಮಿಟಿ ಅಧ್ಯಕ್ಷ ಅಬ್ದುಲ್ ಕರೀಮ್, ಪ್ರಮುಖರಾದ ಅಕ್ಕಿ ಜಿಲಾನ್, ಹೊಸಕೋಟೆ ಜಗದೀಶ, ಕೆ. ಮೌಲಹುಸೇನ್, ಎಂ. ಜಿಯಾರುದ್ದೀನ್, ಕರೀಮ್ ಲಡ್ಡು, ವಾಸೀಮ್, ಖಾಜಮೀನ್ ಸಾಹೇಬರ ವಂಶಸ್ಥರು ಹಾಗೂ ಸದ್ಭಕ್ತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net