ಯುವ ವಿಜ್ಞಾನಿಗಳಿಗೆ ಉತ್ತಮ ವೇದಿಕೆ

ಬಳ್ಳಾರಿಯ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ನ್ಯಾನೋ ಜಾಥಾ ಕಾರ್ಯಕ್ರಮ ನಡೆಯಿತು. ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು, ಕುಲಸಚಿವರಾದ ಪ್ರೊ.ವಿ.ಲೋಕೇಶ್, ಪ್ರೊ.ಎನ್.ಎಂ.ಸಾಲಿ, ಪ್ರೊ. ಹನುಮೇಶ್ ವೈದ್ಯ, ಪ್ರೊ.ಖಡ್ಕೆ ಉದಯಕುಮಾರ್, ಪ್ರೊ.ಕೆ.ಎಸ್.ಲೋಕೇಶ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವವಿದ್ಯಾಲಯವು ಉತ್ತಮ ವೇದಿಕೆ
  • ಅನ್ವೇಷಣೆ ಆಧಾರಿತ ತರಬೇತಿಗೆ ಅನುವು
ಬಳ್ಳಾರಿ : ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹಲವಾರು ಯುವ ಸಂಶೋಧನಾ ವಿಜ್ಞಾನಿಗಳು ಮುಂಚೂಣಿಯಲ್ಲಿದ್ದು, ವಿವಿಯ ಕ್ಯಾಂಪಸ್‌ನಲ್ಲಿ ಬಯೋ ಇನ್ನೋವೇಷನ್ ಸೆಂಟರ್ ತೆರೆಯಲಾಗುವುದು ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು. ಇಲ್ಲಿಯ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ಸೆಂಟರ್ ಫಾರ್‌ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಆರ್ ಆ್ಯಂಡ್ ಡಿ ಕೋಶವು ಬುಧವಾರ ಆಯೋಜಿಸಿದ್ದ ನ್ಯಾನೋ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವ ವಿಜ್ಞಾನಿಗಳಿಗಾಗಿ ವಿಶ್ವವಿದ್ಯಾಲಯವು ಉತ್ತಮ ವೇದಿಕೆಯಾಗಲಿದೆ ಎಂದರು.
ಬೆಂಗಳೂರಿನ ಸಿಇಎನ್‌ಎಸ್ ವಿಜ್ಞಾನಿ ಪ್ರೊ.ಸಿ.ಕೆ.ಸುಭಾಷ್‌ಮಾತನಾಡಿ, ವಿಜ್ಞಾನ ಕ್ಷೇತ್ರದ ಯುವ ಸಂಶೋಧಕರನ್ನು ತಂತ್ರಜ್ಞಾನದಲ್ಲಿ ಸಕ್ರಿಯಗೊಳಿಸುವಲ್ಲಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಯುವ ವಿಜ್ಞಾನಿಗಳಿಗೆ ಸಂಪೂರ್ಣವಾಗಿ ನಾವೀನ್ಯತೆ ಮತ್ತು ಅನ್ವೇಷಣೆ ಆಧಾರಿತ ತರಬೇತಿಗೆ ಅನುವು ಮಾಡಿಕೊಡುವುದೇ ಕೇಂದ್ರದ ಉದ್ದೇಶವಾಗಿದೆ ಎಂದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net