ನಗರದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಹಿನ್ನೆಲೆ ಅದ್ಧೂರಿ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆಯೂ ವೃತ್ತಕ್ಕೆ ತಲುಪಿದ ವೇಳೆ ಸಂಘಟಕರು ಸಂಭ್ರಮದಿಂದ ಪಟಾಕಿ ಸಿಡಿಸಿದರು. ಈ ವೇಳೆ ಪಟಾಕಿಯ ಕಿಡಿಗಳು ಕ್ಲಾಕ್ ಟವರ್‌ನ ಮೇಲ್ಭಾಗಕ್ಕೆ ಹಾರಿ, ಕ್ಲಾಕ್ ಟವರ್ ಮೇಲೆ ಹಾಕಲಾಗಿದ್ದ ಹಸಿರು ಪರದೆಗೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಯಾವುದೇ ಅವಘಡ ಸಂಭವಿಸಿಲ್ಲ. ಗೃಹ ರಕ್ಷಕ ದಳ ಹಾಗೂ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಬೆಂಕಿ ನಂದಿಸಲು ಸಹಕರಿಸಿದರು.