ತೋಟಗಾರಿಗೆ ಇಲಾಖೆಯ ಫಲ-ಪುಷ್ಪ ಪ್ರದರ್ಶನದಲ್ಲಿ ಕೃತಕ ಜಲಪಾತದಲ್ಲಿ ಧುಮ್ಮಿಕ್ಕುವ ನೀರು, ಕಿನಾರೆಯ ಹಸಿರು ಹೊದಿಕೆ ಹಾಗೂ ದೊಡ್ಡ ಬಸವೇಶ್ವರ ಮೂರ್ತಿ, ಆಲಯದ ಗೋಪುರ ಗಮನ ಸೆಳೆಯಿತು. ರೈತರು ಜಮೀನಿನಲ್ಲಿ ಬೆಳೆದ ಹಲವು ಬಗೆಯ ಹಣ್ಣು-ಹಂಪಲು ಪ್ರದರ್ಶಿಸಿದರು. ಕಲ್ಲಂಗಡಿ ಹಣ್ಣಿನಲ್ಲಿ ರಚಿಸಿದ ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ ಹಾಗೂ ಇತರ ಸಾಹಿತಿಗಳ ಚಿತ್ರಗಳಿಗೆ ಜನರು ಮನಸೋತರು. ಪಶುಸಂಗೋಪನೆ, ಮೀನುಗಾರಿಗೆ, ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯ, ಸಹಾಯಧನ, ಆಧುನಿಕ ಪರಿಕರಗಳ ಬಗ್ಗೆ ಜನರು ಮಾಹಿತಿ ಪಡೆದರು.