ಕಂದಾಯ ನಿರೀಕ್ಷಕ ವೈ.ಎಂ.ಜಗದೀಶ, ತಾಲೂಕು ಮೋಜಣಿದಾರ ಅನಿಲ್, ವಿಎಒ ಎನ್.ಕಾಂತರಾಜ ಮಾತನಾಡಿ, ಸರ್ವೇ ನಂಬರ್ 619ರ 1.59ಎಕರೆಯಲ್ಲಿ 60 ಸೆಂಟ್ಸ್ ಪೊಲೀಸ್ ಕ್ವಾರ್ಟಸ್‌ಗೆ, 25 ಸೆಂಟ್ಸ್ ದಾರಿಗಾಗಿ ನೀಡಿದ್ದು, ಉಳಿದ 74 ಸೆಂಟ್ಸ್ ಭೂಮಿಯನ್ನು 10 ಜನರ ಹೆಸರಿಗೆ ಎಸಿ ಪಟ್ಟಾ ನೀಡಿದ್ದಾರೆ. ಈ 74 ಸೆಂಟ್ಸ್ ಭೂಮಿಯಲ್ಲಿ ಮೂರೂವರೆ ಸೆಂಟ್ಸ್‌ನಲ್ಲಿ ಆಂಜನೇಯ ಗುಡಿ, ಒಂದು ಮೂಕ್ಕಾಲು ಸೆಂಟ್ಸ್‌ನಲ್ಲಿ ಧ್ವಜಸ್ತಂಭ, ನಾಲ್ಕು ಸೆಂಟ್ಸ್ ಕಲ್ಯಾಣಿ, ಒಂದು ಸೆಂಟ್ಸ್ ದಾರಿ, 24 ಮೂಕ್ಕಾಲು ಸೆಂಟ್ಸ್ ಮನೆಗಾಗಿ ನೀಡಿದ್ದು 39 ಸೆಂಟ್ಸ್ ಖಾಲಿ ಜಾಗ ಇದೆ. ದಾಖಲೆಯಂತೆ ಅತಿಕ್ರಮಣವಾಗಿಲ್ಲ ಎಂದರು.