6.58 ಲಕ್ಷ ಪ್ರಕರಣ ಇತ್ಯರ್ಥ

ಹಗರಿಬೊಮ್ಮನಹಳ್ಳಿ ನ್ಯಾಯಾಲಯದಲ್ಲಿ ಶನಿವಾರ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮಧುಸೂದನ್.ಡಿ.ಕೆ. ಹಾಗೂ ಸಿವಿಲ್ ನ್ಯಾಯಾಧೀಶ ಸೈಯದ್ ಮೋಹಿದ್ದೀನ್ ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ವಕೀಲರಾದ ಅಕ್ಕಿ ಮಲ್ಲಿಕಾರ್ಜುನ, ಕೆ.ಜೆ.ಜಗದೀಶ, ಲಿಂಗನಗೌಡ್ರು, ಬಸಟ್ಟಿ ಬಸವರಾಜ, ಮಲ್ಲಿಕಾರ್ಜುನ ಇತರರಿದ್ದರು.
ಹಗರಿಬೊಮ್ಮನಹಳ್ಳಿ ನ್ಯಾಯಾಲಯದಲ್ಲಿ ಶನಿವಾರ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮಧುಸೂದನ್.ಡಿ.ಕೆ. ಹಾಗೂ ಸಿವಿಲ್ ನ್ಯಾಯಾಧೀಶ ಸೈಯದ್ ಮೋಹಿದ್ದೀನ್ ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ವಕೀಲರಾದ ಅಕ್ಕಿ ಮಲ್ಲಿಕಾರ್ಜುನ, ಕೆ.ಜೆ.ಜಗದೀಶ, ಲಿಂಗನಗೌಡ್ರು, ಬಸಟ್ಟಿ ಬಸವರಾಜ, ಮಲ್ಲಿಕಾರ್ಜುನ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಲೋಕ ಅದಾಲತ್‌
  • ಬಳ್ಳಾರಿ-ವಿಜಯನಗರ 165.45 ಕೋಟಿ ರೂ. ಅಧಿಕ ಪರಿಹಾರ
ಬಳ್ಳಾರಿ: ಬಳ್ಳಾರಿ-ವಿಜಯನಗರ ಜಿಲ್ಲೆಯ 27 ಕಡೆ ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ 6,58,545 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ, 165.45 ಕೋಟಿ ರೂ.ಗೂ ಅಧಿಕ ಮೊತ್ತದ ಪರಿಹಾರ ವಸೂಲು ಮಾಡಲಾಗಿದೆ.
ವಿದ್ಯುತ್ ಬಿಲ್ ಬಾಕಿ, ಆಸ್ತಿ ತೆರಿಗೆ, ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ಲಕ್ಷಾಂತರ ಪ್ರಕರಣಗಳನ್ನು ಸ್ಥಳದಲ್ಲೇ ಬಗೆಹರಿಸಲಾಯಿತು. ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಬಾಕಿಯಿದ್ದ 11, 406 ಪ್ರಕರಣಗಳನ್ನು ಭೌತಿಕ ವಿಚಾರಣೆ ಮೂಲಕ ಇತ್ಯರ್ಥಪಡಿಸಲಾಯಿತು.
ದಂಪತಿ ಪ್ರಕರಣ ಸುಖಾಂತ್ಯ: ಹಗರಿಬೊಮ್ಮನಹಳ್ಳಿ: ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 197 ಪ್ರಕರಣಗಳು ಇತ್ಯರ್ಥವಾಗಿ 4,24,48,147 ರೂ. ಪರಿಹಾರ ಸಂಗ್ರಹಿಸಲಾಯಿತು.
ಹಿರಿಯ ಮತ್ತು ಕಿರಿಯ ಶ್ರೇಣಿ ನ್ಯಾಯಾಲಯಗಳಲ್ಲಿ ಚೆಕ್ ಬೌನ್ಸ್, ಪಾಲು ವಿವಾದ ಹಾಗೂ ಇತ್ಯಾದಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಮಧುಸೂದನ್.ಡಿ.ಕೆ. ಅವರು 821ರ ಪೈಕಿ 106 ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ಸಿವಿಲ್ ನ್ಯಾಯಾಧೀಶ ಸೈಯದ್ ಮೋಹಿದ್ದೀನ್ ಅವರು 779ರ ಪೈಕಿ 83 ಪ್ರಕರಣಗಳನ್ನು ಇತ್ಯರ್ಥ ಮಾಡಿದರು.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಎರಡು ಜೋಡಿಗಳ ಮನವೊಲಿಸಿ ವಿವಾದ ಇತ್ಯರ್ಥ ಪಡಿಸಲಾಯಿತು. ವಕೀಲರ ಸಂಘದ ಸದಸ್ಯರಾದ ಅಕ್ಕಿ ಮಲ್ಲಿಕಾರ್ಜುನ, ಕೆ.ಜೆ.ಜಗದೀಶ, ಲಿಂಗನಗೌಡ್ರು, ಬಸಟ್ಟಿ ಬಸವರಾಜ, ಮಲ್ಲಿಕಾರ್ಜುನ, ಸಿಬ್ಬಂದಿ ರಾಜಶೇಖರಗೌಡ್ರು, ಮೇಘರಾಜ, ಸತೀಶ, ಕೃಷ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net