ಬುಕ್ಕಸಾಗರ ಸಹಕಾರಿಯಲ್ಲಿ ₹51.37 ಲಕ್ಷ ಬಂಡವಾಳ

ಬುಕ್ಕಸಾಗರದಲ್ಲಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮಹಾಜನ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಕಟ್ಟೆ ಎರ‌್ರಿಸ್ವಾಮಿ ಮಾತನಾಡಿದರು. ಅಧ್ಯಕ್ಷ ಕೆ.ರಾಜೇಶ, ಉಪಾಧ್ಯಕ್ಷ ಹರಿಜನ ಗುರುರಾಜ, ನಿರ್ದೇಶಕರಾದ ಬಿ.ಸೋಮಶೇಖರ, ಎಲ್.ಎಸ್.ರುದ್ರಪ್ಪ ಇತರರಿದ್ದರು.
ಬುಕ್ಕಸಾಗರದಲ್ಲಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮಹಾಜನ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಕಟ್ಟೆ ಎರ‌್ರಿಸ್ವಾಮಿ ಮಾತನಾಡಿದರು. ಅಧ್ಯಕ್ಷ ಕೆ.ರಾಜೇಶ, ಉಪಾಧ್ಯಕ್ಷ ಹರಿಜನ ಗುರುರಾಜ, ನಿರ್ದೇಶಕರಾದ ಬಿ.ಸೋಮಶೇಖರ, ಎಲ್.ಎಸ್.ರುದ್ರಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಕಾರ್ಯನಿರ್ವಾಹಕ ಕಟ್ಟೆ ಎರ‌್ರಿಸ್ವಾಮಿ ಮಾಹಿತಿ

ಕಂಪ್ಲಿ: ಬುಕ್ಕಸಾಗರ ಸಹಕಾರಿ ಸಂಘ 1278 ಸದಸ್ಯರು, 51.37ಲಕ್ಷ ರೂ. ಷೇರು ಬಂಡವಾಳ, 8.76 ಲಕ್ಷ ರೂ. ನಾನಾ ನಿಧಿ, 5.90 ಕೋಟಿ ರೂ. ಜವಾಬ್ದಾರಿ ಹೊಂದಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಕಟ್ಟೆ ಎರ‌್ರಿಸ್ವಾಮಿ ಹೇಳಿದರು.

ಬುಕ್ಕಸಾಗರದಲ್ಲಿ ಸೋಮವಾರ ಬುಕ್ಕಸಾಗರ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮಹಾಜನಸಭೆ ಯಲ್ಲಿ ಮಾತನಾಡಿದರು. 22,56 ಲಕ್ಷ ರೂ. ಸರ್ಕಾರದ ಸಾಲ ಮನ್ನಾ ಬಾಕಿ ಹಣ ಬರುವುದಿದೆ. 3.85 ಕೋಟಿ ರೂ. ಸಾಲ ನೀಡಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷ ಕೆ.ರಾಜೇಶ ಮಾತನಾಡಿ, ಸಂಘವನ್ನು ಲಾಭದತ್ತ ಕೊಂಡೊಯ್ಯಲು ರೈತರಿಗೆ 1 ಕೋಟಿ ರೂ. ಸಕಾಲದಲ್ಲಿ ಗುಣಮಟ್ಟದ ರಾಸಾಯನಿಕ ಗೊಬ್ಬರ ವಿತರಿಸುವುದು, ಸಂಘದ ಸದಸ್ಯರಿಗೆ 1 ಕೋಟಿ ರೂ. ವ್ಯಾಪಾರ, ಬಿಡಿಪಿ ಸಾಲ, ದ್ವಿಚಕ್ರ ವಾಹನ ಸಾಲ, ನಂದಿನಿ ಹಾಲಿನ ಉತ್ಪನ್ನಗಳ ವಿತರಣೆ, ಎಣ್ಣೆ ಬೀಜ ಉತ್ಪಾದಕರ ಸಹಕಾರ ಸಂಘದ ಉತ್ಪನ್ನಗಳ ಸರಬರಾಜು, ಆಸ್ತಿ ಮೇಲೆ ಅಡಮಾನ ಸಾಲ, ಪಂಪ್‌ಸೆಟ್, ಟ್ರ್ಯಾಕ್ಟರ್ ಸಾಲ ನೀಡುವುದು ಸೇರಿ ವಿವಿಧ ಯೋಜನೆಗಳ ಗುರಿ ಹೊಂದಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಹರಿಜನ ಗುರುರಾಜ, ನಿರ್ದೇಶಕರಾದ ಬಿ.ಸೋಮಶೇಖರ, ಎಲ್.ಎಸ್.ರುದ್ರಪ್ಪ, ಕೆ.ಮಹ್ಮದ್ ರಫಿಕ್, ಯು.ಮಂಜುನಾಥ, ಎಂ.ಸಿದ್ಧಲಿಂಗೇಶ್ವರ, ನಾಯಕರ ವೀರೇಶ, ಬಿ.ಅನ್ನಪೂರ್ಣ, ಹೈದರ ಖಾಜಾಸಾಬ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net