ವ್ಯಾಸರಾಜ ಸಾರ್ವಭೌಮರ ಪೂರ್ವಾರಾಧನೆ

ಆನೆಗೊಂದಿಯ ನವವೃಂದಾವನಗಡ್ಡಿಯಲ್ಲಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರ 487ನೇ ಆರಾಧನೆ ನಿಮಿತ್ತ ವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಂಸ್ಥಾನ ಪೂಜೆ ಶುಕ್ರವಾರ ನೆರವೇರಿಸಿದರು.
ಆನೆಗೊಂದಿಯ ನವವೃಂದಾವನಗಡ್ಡಿಯಲ್ಲಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರ 487ನೇ ಆರಾಧನೆ ನಿಮಿತ್ತ ವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಂಸ್ಥಾನ ಪೂಜೆ ಶುಕ್ರವಾರ ನೆರವೇರಿಸಿದರು.
Published on
ಶ್ರೀಮಠದ ಪೀಠಾಧಿಪತಿ ವಿದ್ಯಾಶ್ರೀಶ ತೀರ್ಥರಿಂದ ಸಂಸ್ಥಾನ ಪೂಜೆ
ಗಂಗಾವತಿ: ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ನವವೃಂದಾವನಗಡ್ಡಿಯಲ್ಲಿ ಸೋಸಲೆ ಶ್ರೀ ವ್ಯಾಸರಾಜ ಮಠದಿಂದ ಶ್ರೀ ವ್ಯಾಸರಾಜ ಗುರುಸಾರ್ವಭೌಮರ 487ನೇ ಆರಾಧನಾ ಮಹೋತ್ಸವ ನಿಮಿತ್ತ ಪೂರ್ವಾರಾಧನೆಗೆ ಶುಕ್ರವಾರ ಚಾಲನೆ ದೊರೆಯಿತು.
ವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಿದ್ದು, ಗುರುವಾರ ಪುರಪ್ರವೇಶಿಸಿದ ಶ್ರೀಗಳು, ಗ್ರಾಮದ ಶ್ರೀ ರಂಗನಾಥ ದೇವಾಲಯದಿಂದ ಶ್ರೀ ಸಂಸ್ಥಾನ ದೇವರು, ಶ್ರೀ ಸರ್ವಮೂಲ, ಶ್ರೀ ಮನ್ಯಾಯಸುಧಾ ಮತ್ತು ವ್ಯಾಸತ್ರಯ ಗ್ರಂಥಗಳ ಮೆರಣಿಗೆಯೊಂದಿಗೆ ನವವೃಂದಾವನ ಗಡ್ಡಿಯಲ್ಲಿ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಪೂರ್ವಾರಾಧನೆ ನಿಮಿತ್ತ ಶ್ರೀ ವ್ಯಾಸರಾಜರ ವೃಂದಾವನಕ್ಕೆ ಪಂಚಾಮೃತಾಭಿಷೇಕ, ಋಕ್ಸಂ ಹಿತಾಯಾಗ, ಶ್ರೀಕೃಷ್ಣ ಷಡಕ್ಷರ ಮಂತ್ರಹೋಮ, ಶ್ರೀ ಮನ್ಯುಸೂಕ್ತ ಪುರಶ್ಚರಣ ಹೋಮ, ವಿಶೇಷ ಪೂಜೆ, ಹೂವಿನ ಅಲಂಕಾರ, ಮಹಾಮಂಗಳಾರತಿ, ಶ್ರೀಗಳಿಂದ ಸಂಸ್ಥಾನ ಪೂಜೆ, ನಿರಂತರ ಪಾರಾಯಣ, ಶ್ರೀರಂಗಂ ಹಯವದನ ಭಜನಾ ಮಂಡಳಿಯಿಂದ ದಾಸವಾಣಿ, ಬ್ರಹ್ಮಣ್ಯೇಚಾರ್‌ರಿಂದ ಉಪನ್ಯಾಸ ಮತ್ತು ತೀರ್ಥ ಪ್ರಸಾದ ವಿತರಣೆ ಜರುಗಿತು. ಶ್ರೀಮಠದ ಪ್ರಮುಖರಾದ ಡಿ.ಪಿ.ಆನಂದಾಚಾರ್, ಮಧುಸೂದನಾಚಾರ್, ಸಿ.ಆರ್.ಪ್ರಹ್ಲಾದಾಚಾರ್, ಬದರಿನಾಥಾಚಾರ್, ಹರಿಆಚಾರ್ ವಾಲ್ವೇಕರ್, ಸುಮಂತಾಚಾರ್, ವಿಜಯೇಂದ್ರಾಚಾರ್, ರಾಘವೇಂದ್ರ ಗುನ್ನೂರು, ಗುರುರಾಜ್ ದೇಶಪಾಂಡೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net