422 ಪ್ರಕರಣಗಳು ಇತ್ಯರ್ಥ

ಹಗರಿಬೊಮ್ಮನಹಳ್ಳಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಉಷಾರಾಣಿ ಆರ್. ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ಸರ್ಕಾರಿ ಅಭಿಯೋಜಕರಾದ ಮೀನಾಕ್ಷಿ ಎಂ., ನಿರ್ಮಲಾ, ವಕೀಲರ ಸಂಘದ ಉಪಾಧ್ಯಕ್ಷ ಬಾಗಳಿ ಮಂಜುನಾಥ , ಕಾರ್ಯದರ್ಶಿ ಎಂ.ಮಲ್ಲಪ್ಪ,  ಖಜಾಂಚಿ ಕೆ.ಸಣ್ಣ ನಿಂಗನಗೌಡ, ವಕೀಲರಿದ್ದರು.

Published on
ಹರಪನಹಳ್ಳಿ: ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದಿಂದ ಶನಿವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 622 ಪ್ರಕರಣಗಳ ಪೈಕಿ 422 ಕೇಸ್‌ಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ನ್ಯಾಯಾಧೀಶರಾದ ಉಷಾರಾಣಿ ಆರ್. ಹಾಗೂ ಮನು ಶರ್ಮ ಎಸ್.ಪಿ. ನೇತೃತ್ವದಲ್ಲಿ ರಾಜೀ ಸಂಧಾನ ಪ್ರಕ್ರಿಯೆ ನಡೆಯಿತು.
ರಸ್ತೆ ಅಪಘಾತ, ಚೆಕ್ ಬೌನ್ಸ್ , ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಮೋಟಾರು ವಾಹನ ಇತ್ಯಾದಿ 313 ಪ್ರಕರಣಗಳ ಪೈಕಿ 148 ಪ್ರಕಣಗಳನ್ನು ಇತ್ಯರ್ಥಪಡಿಸಲಾಯಿತು. ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿದ್ದ 308 ಪ್ರಕರಣಗಳ ಪೈಕಿ 274 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು. ವಕೀಲರಾದ ಪಿ.ಜಗದೀಶ್ ಗೌಡ, ಬಸವರಾಜ್ ಕೆ., ಎಸ್.ಎಂ.ರುದ್ರಮುನಿ, ಬಿ.ಹಾಲೇಶ್, ಕೆ.ಪ್ರಕಾಶ, ಟಿ.ಎಂ.ರಮೇಶ, ಗಿರೀಶ್ ಗೌಡ, ತಿಪ್ಪೇಶ್, ನೋಟರಿ ಪ್ರಸಾದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net