ವಂಚನೆಯ 40 ಕಡತಗಳು ವಿಲೇವಾರಿ

ಬಳ್ಳಾರಿಯಲ್ಲಿ ನೂತನವಾಗಿ ಆರಂಭಗೊಂಡ ಅದಾಯ ತೆರಿಗೆ ವಿಭಾಗದ ನೂತನ ಕಚೇರಿಯ ಶಿಲಾನ್ಯಾಸ ಫಲಕವನ್ನು ಜಂಟಿ ನಿರ್ದೇಶಕ ಆರ್.ಭರತ್ ಅನಾವರಣಗೊಳಿಸಿದರು. ಇಲಾಖೆಯ ಸಹಾಯಕ ಆಯುಕ್ತ ಡಿ.ಪಾಂಡುರಂಗ ಇದ್ದರು.
ಬಳ್ಳಾರಿಯಲ್ಲಿ ನೂತನವಾಗಿ ಆರಂಭಗೊಂಡ ಅದಾಯ ತೆರಿಗೆ ವಿಭಾಗದ ನೂತನ ಕಚೇರಿಯ ಶಿಲಾನ್ಯಾಸ ಫಲಕವನ್ನು ಜಂಟಿ ನಿರ್ದೇಶಕ ಆರ್.ಭರತ್ ಅನಾವರಣಗೊಳಿಸಿದರು. ಇಲಾಖೆಯ ಸಹಾಯಕ ಆಯುಕ್ತ ಡಿ.ಪಾಂಡುರಂಗ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಹಿವಾಟುಗಳ ಆಳವಾದ ತನಿಖೆ

ಬಳ್ಳಾರಿ :

ಜಿಲ್ಲೆಯ ವ್ಯಾಪ್ತಿಯೊಂದರಲ್ಲೇ ತೆರಿಗೆ ವಂಚನೆಗೆ ಸಂಬಂಧಿಸಿದಂತೆ 200ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿದ್ದು, 40 ಕಡತಗಳು ವಿಲೇವಾರಿ ಮಾಡಲಾಗಿದೆ ಎಂದು ಹುಬ್ಬಳ್ಳಿ ವಿಭಾಗದ ಅದಾಯ ತೆರಿಗೆ(ತನಿಖೆ) ಇಲಾಖೆಯ ಜಂಟಿ ನಿರ್ದೇಶಕ ಆರ್.ಭರತ್ ಹೇಳಿದರು.

ನಗರದ ಕೆಎಚ್‌ಬಿ ಕಾಲನಿಯಲ್ಲಿ ನೂತನವಾಗಿ ಆರಂಭಗೊಂಡ ಅದಾಯ ತೆರಿಗೆ ವಿಭಾಗದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಬ್ಯಾಂಕ್ ವಹಿವಾಟುಗಳ ಆಳವಾದ ತನಿಖೆ ಹಾಗೂ ಅಗತ್ಯವಿದ್ದಲ್ಲಿ ಸರ್ವೆ, ದಾಳಿ ಕಾರ್ಯಾಚರಣೆಗಳು ಮುಂದುವರಿಯಲಿವೆ. ಸ್ಥಳೀಯ ಆರ್ಥಿಕ ಸ್ಥಿತಿಗತಿ ಹಾಗೂ ತೆರಿಗೆ ಸಂಗ್ರಹ ವೃದ್ಧಿಗಾಗಿ ಸಿಎ ಮತ್ತು ವೃತ್ತಿಪರರೊಂದಿಗೆ ನಿಯಮಿತವಾಗಿ ಸಂವಾದ ನಡೆಸಲು ಇಲಾಖೆ ನಿರ್ಧರಿಸಿದೆ ಎಂದರು.
ಚಿತ್ರದುರ್ಗದಿಂದ ಬೀದರ್ ವರೆಗಿನ 12ರಿಂದ 13 ಜಿಲ್ಲೆಗಳ ಪೈಕಿ ಜಿಲ್ಲೆಯು ಗರಿಷ್ಠ ಜಿಎಸ್‌ಟಿ ನೋಂದಣಿ ಹಾಗೂ ಅತಿ ಹೆಚ್ಚು ಬ್ಯಾಂಕಿಂಗ್ ವಹಿವಾಟು ಹೊಂದಿರುವ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಲಾಖೆಯು ತೆರಿಗೆ ವ್ಯಾಪ್ತಿ ವಿಸ್ತರಿಸಲು ನಡೆಸಿದ ಆಪರೇಷನ್ ನಡ್ಜ್ ಅಡಿಯಲ್ಲಿ ಜಿಲ್ಲೆಯಲ್ಲೇ ಸುಮಾರು 40 ಜೆಡಿಎ ರಿಯಲ್ ಎಸ್ಟೇಟ್ ಯೋಜನೆಗಳನ್ನು ಗುರುತಿಸಲಾಗಿದೆ ಎಂದರು.
ಹುಬ್ಬಳ್ಳಿ ವಿಭಾಗದ ಆದಾಯ ತೆರಿಗೆ (ತನಿಖೆ) ಇಲಾಖೆಯ ಸಹಾಯಕ ನಿರ್ದೇಶಕ ಕೆ.ಗೋಪಾಲ್ ಕೃಷ್ಣಮೂರ್ತಿ ಮಾತನಾಡಿ, ನೂತನ ಕಚೇರಿಯ ಮೂಲಕ ತನಿಖಾ ವಿಭಾಗವು ಮತ್ತಷ್ಟು ಚುರುಕಾಗಿ ಕಾರ್ಯನಿರ್ವಹಿಸಿ, ಮಹತ್ವದ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ಇಲಾಖೆಗೆ ಉತ್ತಮ ಹೆಸರು ತರಲಿ ಎಂದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net