ಎಸ್‌ಎಸ್‌ಕೆ ಸಮುದಾಯ ಭವನಕ್ಕೆ ₹25 ಲಕ್ಷ ಅನುದಾನ

ಹಗರಿಬೊಮ್ಮನಹಳ್ಳಿ ಪಟ್ಟಣದ ಜಗದಂಬಾ ದೇಗುಲದ 17ನೇ ವಾರ್ಷಿಕೋತ್ಸವ ಹಾಗೂ ಗಣೇಶ ಮತ್ತು ದತ್ತಾತ್ರೇಯ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ದೇಗುಲದ ಕಲಶಾರೋಹಣ ನಿಮಿತ್ತ ಮಂಗಳವಾರ ತಾಲೂಕು ಎಸ್‌ಎಸ್‌ಕೆ ಸಮಾಜ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಶಾಸಕ ಕೆ. ನೇಮಿರಾಜ್ ನಾಯ್ಕ ಮಾತನಾಡಿದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ಜಗದಂಬಾ ದೇಗುಲದ 17ನೇ ವಾರ್ಷಿಕೋತ್ಸವ ಹಾಗೂ ಗಣೇಶ ಮತ್ತು ದತ್ತಾತ್ರೇಯ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ದೇಗುಲದ ಕಲಶಾರೋಹಣ ನಿಮಿತ್ತ ಮಂಗಳವಾರ ತಾಲೂಕು ಎಸ್‌ಎಸ್‌ಕೆ ಸಮಾಜ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಶಾಸಕ ಕೆ. ನೇಮಿರಾಜ್ ನಾಯ್ಕ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ. ನೇಮಿರಾಜ್ ನಾಯ್ಕ ಭರವಸೆ
  • ಜಗದಂಬಾ ದೇಗುಲದ ವಾರ್ಷಿಕೋತ್ಸವ, ಕಲಶಾರೋಹಣ
ಹಗರಿಬೊಮ್ಮನಹಳ್ಳಿ: ಪಟ್ಟಣದ ಎಸ್‌ಎಸ್‌ಕೆ ಸಮಾಜದ ಸಹಸ್ರಾರ್ಜುನ ಸಮುದಾಯ ಭವನ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಅನುದಾನದಲ್ಲಿ 25 ಲಕ್ಷ ರೂ. ನೀಡಲಾಗುವುದು ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ ಭರವಸೆ ನೀಡಿದರು.
ಪಟ್ಟಣದ ಹಳೇ ಊರಿನ ಜಗದಂಬಾ ದೇಗುಲದ 17ನೇ ವಾರ್ಷಿಕೋತ್ಸವ ಹಾಗೂ ಗಣೇಶ ಮತ್ತು ದತ್ತಾತ್ರೇಯ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ದೇಗುಲದ ಕಲಶಾರೋಹಣ ನಿಮಿತ್ತ ಮಂಗಳವಾರ ತಾಲೂಕು ಎಸ್‌ಎಸ್‌ಕೆ ಸಮಾಜ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಸಮಾಜದ ಮಾಜಿ ಕಾರ್ಯದರ್ಶಿ ಲಕ್ಷ್ಮೀಕಾಂತ್ ಸಾ ಬಾವಿಕಟ್ಟಿ ಮಾತನಾಡಿ, ದೇಗುಲ ಮತ್ತು ಗೋಪುರ ನಿರ್ಮಾಣಕ್ಕೆ ಸಂಡೂರಿನ ಯುವರಾಜ ಕಾರ್ತಿಕ್ ಎಂ. ಘೋರ್ಪಡೆ ಅವರು ಸಕಾಲಕ್ಕೆ ನೆರವು ಒದಗಿಸಿದ್ದರ ಪ್ರತಿಫಲವಾಗಿ ಇಂದು ದೇಗುಲ ಕಂಗೊಳಿಸುತ್ತಿದೆ. ಸಮುದಾಯ ಭವನಕ್ಕೆ ಶಾಸಕರು ಅನುದಾನ ಒದಗಿಸುವಂತೆ ಮನವಿ ಮಾಡಿದರು.
ಸಮಾಜದ ಅಧ್ಯಕ್ಷ ದೀಪಕ್ ಸಾ ಕಠಾರೆ ಅಧ್ಯಕ್ಷತೆ ವಹಿಸಿ ಮಾತನಾಡಿ, 17 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ದೇಗುಲದ ಗೋಪುರ ನಿರ್ಮಾಣ ಕಾರ್ಯ ಪೂರೈಸಿ, ಇಂದು ಕಲಶಾರೋಹಣ ನೆರವೇರಿಸಲಾಗಿದೆ. ಇದಕ್ಕೆ ಹಲವಾರು ಜನರು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು. ಎಸ್‌ಎಸ್‌ಎಲ್ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ದೇಣಿಗೆ ನೀಡಿ ಸಹಕರಿಸಿದವರನ್ನು ಗೌರವಿಸಲಾಯಿತು.
ಸಮಾಜದ ಪದಾಧಿಕಾರಿಗಳಾದ ಕೃಷ್ಣಮೂರ್ತಿ ರಂಗರೇಜ್, ಜವಾಹರ ಸಾ ಅಂಟಾಳಮರದ, ಶ್ರೀನಿವಾಸ ಚಾವಡಿಮನಿ, ಅಶೋಕಸಾ ಸಿದ್ಲಿಂಗ, ರಂಗನಾಥಸಾ ಕಠಾರೆ, ಅಶೋಕ ಮೆಹರವಾಡೆ, ಪರಶುರಾಮಸಾ ಪವಾರ್, ಡಾ. ಹರ್ಷ, ಡಾ. ಜಯವಂತರಾವ್ ಕಾಶೀಂಗಾವ್, ಸೋನಾಬಾಯಿ ಭಾವಿಕಟ್ಟಿ, ಪ್ರಮುಖರಾದ ಸಿ.ಎಚ್. ಸಿದ್ಧರಾಜು, ಶಾರದಾ ಮಂಜುನಾಥ, ರಾಮುಸಾ ಕಾಟ್ವಾ, ಬಾಳಕೃಷ್ಣಸಾ ದಲಬಂಜನ್, ರಾಕೇಶ್ ಭಾವಿಕಟ್ಟಿ, ಓಂಕಾರ್ ಭಾವಿಕಟ್ಟಿ, ಕೃಷ್ಣಾಸಾ ಬಾಕಳೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net