168 ವಾರಸುದಾರರ ಹಕ್ಕು ಬದಲಾವಣೆ

ಎಮ್ಮಿಗನೂರು ಗ್ರಾಪಂ ಸಭಾಂಗಣದಲ್ಲಿ ಇ-ಪೌತಿ ಆಂದೋಲನ ಕಾರ್ಯಕ್ರಮದಲ್ಲಿ ಎಡಿಸಿ ಮಹಮ್ಮದ್ ಎನ್.ಜುಬೇರ್ ವಾರಸುದಾರರಿಗೆ ಪೌತಿ ಪಹಣಿ ಪ್ರತಿ ವಿತರಿಸಿದರು.
ಎಮ್ಮಿಗನೂರು ಗ್ರಾಪಂ ಸಭಾಂಗಣದಲ್ಲಿ ಇ-ಪೌತಿ ಆಂದೋಲನ ಕಾರ್ಯಕ್ರಮದಲ್ಲಿ ಎಡಿಸಿ ಮಹಮ್ಮದ್ ಎನ್.ಜುಬೇರ್ ವಾರಸುದಾರರಿಗೆ ಪೌತಿ ಪಹಣಿ ಪ್ರತಿ ವಿತರಿಸಿದರು.
Published on
ಕಂಪ್ಲಿ: ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಇ-ಪೌತಿ ಆಂದೋಲನ ಹಮ್ಮಿಕೊಂಡಿದು,್ದ ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಜುಬೇರ್ ಹೇಳಿದರು.
ಎಮ್ಮಿಗನೂರು ಗ್ರಾಪಂ ಸಭಾಂಗಣದಲ್ಲಿ ಕಂದಾಯ ಇಲಾಖೆಯಿಂದ ಆಯೋಜಿಸಿದ್ದ ಇ-ಪೌತಿ ಆಂದೋಲನ ಹಾಗೂ ಪಿಂಚಣಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಎಮ್ಮಿಗನೂರು ಗ್ರಾಮವನ್ನು ಪೌತಿ ಪಹಣಿಮುಕ್ತ ಗ್ರಾಮವನ್ನಾಗಿಸಲು ದತ್ತು ಪಡೆಯಲಾಗಿದೆ. ಜೀವಂತ ವ್ಯಕ್ತಿಗಳ ಹೆಸರಿನಲ್ಲಿ ಪಹಣಿ ಇದ್ದಲ್ಲಿ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯ ಎಂದರು.
ಎಮ್ಮಿಗನೂರು ಗ್ರಾಮದಲ್ಲಿ 361ಪೌತಿದಾರರ ಪಹಣಿಗಳಿದ್ದು, ಈ ಪೈಕಿ 168 ವಾರಸುದಾರರ ಹಕ್ಕು ಬದಲಿಸಿ ಪಹಣಿ ನೀಡಲಾಗಿದೆ. 186 ಪಹಣಿಗಳು ಏಕ ಮಾಲೀಕತ್ವದಲ್ಲಿವೆ. 51ಪಹಣಿ ಹಕ್ಕು ಬದಲಾವಣೆಗೆ ಅರ್ಜಿ ಸ್ವೀಕರಿಸಲಾಗಿದೆ. ನಾಲ್ವರು ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪ್ರತಿ ವಿತರಿಸಿದ್ದು, ಪಿಂಚಣಿಗೆ ಮೂರು ಅರ್ಜಿ ಸಲ್ಲಿಕೆಯಾಗಿವೆ ಎಂದರು.
ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬೇರ‌್ಗಿ ಮಹೇಶಗೌಡ, ಗ್ರಾಮಸ್ಥೆ ನೀಲಮ್ಮ ಮಾತನಾಡಿ, ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ಕೂಡಲೇ ಪೌತಿ ಪಹಣಿಗಳನ್ನು ವಾರಸುದಾರರ ಹೆಸರಿಗೆ ಮಾಡಿಕೊಡಬೇಕು. ಕಚೇರಿಗೆ ಅಲೆದಾಡಿಸದೆ ಪಿಂಚಣಿ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ನಿಗಾ ತೋರಬೇಕು ಎಂದು ಆಗ್ರಹಿಸಿದರು.
ವಿಎಒಗಳಾದ ಎಚ್.ವಿ.ಮಂಜುನಾಥ, ಮಹಮ್ಮದ್ ರಬ್, ಕೆ.ಮಂಜುನಾಥ, ತಾಪಂ ಮಾಜಿ ಸದಸ್ಯ ವೆಂಕಟರಾಮರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net